ಕೋಟ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ರಘು ಮಧ್ಯಸ್ಥ ಅವಿರೋಧ ಆಯ್ಕೆ

ಕೋಟ: ಸಹಕಾರಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಳ ಮೂಲಕ ಗುರುತಿಸಿಕೊಂಡಿರುವ ಕೋಟ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕರ ಮಂಡಳಿಯ ತೆರವಾದ ಸ್ಥಾನಕ್ಕೆ ರಘು ಮಧ್ಯಸ್ಥ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿದ್ದ ನಾಗರಾಜ್ ಹಂದೆ ಅವರ ನಿಧನದಿಂದ ನಿರ್ದೇಶಕರ ಮಂಡಳಿಯಲ್ಲಿ ಒಂದು ಸ್ಥಾನ ತೆರವಾಗಿತ್ತು. ಸಹಕಾರಿ ಕಾಯ್ದೆಯ ನಿಯಮಾನುಸಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಘು ಮಧ್ಯಸ್ಥ ಅವರನ್ನು ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆಯ ವೇಳೆ ಸಂಘದ ಅಧ್ಯಕ್ಷ ಕೃಷ್ಣ ಕಾಂಚನ್, ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ, ಪ್ರಧಾನ ವ್ಯವಸ್ಥಾಪಕ (ಜಿಎಂ) ಶರತ್ ಕುಮಾರ್ ಶೆಟ್ಟಿ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದು, ನೂತನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.

ರಘು ಮಧ್ಯಸ್ಥ ಅವರ ಸೇರ್ಪಡೆಯಿಂದ ಸಂಘದ ಆಡಳಿತ ಮತ್ತಷ್ಟು ಬಲಗೊಂಡು, ಸದಸ್ಯರು ಹಾಗೂ ರೈತಪರ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯುವ ವಿಶ್ವಾಸವನ್ನು ಆಡಳಿತ ಮಂಡಳಿ ವ್ಯಕ್ತಪಡಿಸಿದೆ.

Join WhatsApp

Join Now

Join Telegram

Join Now

Read more

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿಯಲ್ಲಿ ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಉದ್ಯಾವರ: ಭಾರತೀಯ ಸಂಸ್ಕೃತಿಯಲ್ಲಿ ಪೀಠೋಪಕರಣಗಳಿಗೆ ವಿಶೇಷ ಮಹತ್ವ – ಉತ್ತಮ ಅರೋಗ್ಯಕ್ಕೂ ಸಮರ್ಪಕ ಪೀಠದ ಅಗತ್ಯವಿದೆ. ಶ್ರೀ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ

ಗಾಂಧೀಜಿಯವರ ಪ್ರಬಲ ಅಸ್ತ್ರ ಸತ್ಯ ಮತ್ತು ಅಹಿಂಸೆ: ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮಾ ಪೂಜಾರಿ

ಮಣಿಪಾಲ: ಗ್ರಾಹಕರಲ್ಲಿ ಆರ್ಥಿಕ ಜಾಗ್ರತೆ ಮುಖ್ಯ. ಶಾಖಾ ಪ್ರಭಂದಕ ಸದಾಶಿವ ಕೊಠಾರಿ

ಸಾಲಿಗ್ರಾಮ: ದುಡಿಯುವುದಕ್ಕೆ ನೀಡುವ ಶ್ರದ್ದೆ ಉಳಿತಾಯಕ್ಕೂ ನೀಡಿ – ಆರ್ಥಿಕ ಅರಿವು ಶಿಬಿರದಲ್ಲಿ ಲೀಡ್ ಬ್ಯಾಂಕ್ ಪ್ರತಿ ನಿಧಿ ಆಶಾಲತಾ ಸಲಹೆ

ಕುಂದಾಪುರ: ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿಯಲ್ಲಿ ಗುರುವಂದಾನ ಕಾರ್ಯಕ್ರಮ

Leave a Comment