ಮಣಿಪಾಲ: ಗ್ರಾಹಕರಲ್ಲಿ ಆರ್ಥಿಕ ಜಾಗ್ರತೆ ಮುಖ್ಯ. ಶಾಖಾ ಪ್ರಭಂದಕ ಸದಾಶಿವ ಕೊಠಾರಿ

ಮಣಿಪಾಲ: ಗ್ರಾಹಕರಲ್ಲಿ ಆರ್ಥಿಕ ಜಾಗ್ರತೆ ಮುಖ್ಯ. ಶಾಖಾ ಪ್ರಭಂದಕ ಸದಾಶಿವ ಕೊಠಾರಿ

ಮಣಿಪಾಲ: ನಬಾರ್ಡ್ ಸಹಯೋಗದೊಂದಿಗೆ ನಡೆಸಿದ ಗ್ರಾಹರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ SCDCC ಬ್ಯಾಂಕ್ ಮಣಿಪಾಲ ಶಾಖೆಯಲ್ಲಿ ಶುಕ್ರವಾರ ಮದ್ಯಾಹ್ನ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ವ್ಯವಸ್ಥಾಪಕರಾದ ಶ್ರೀ ಸದಾಶಿವ ಕೊಠಾರಿ ವಹಿಸಿದರು. ನವೋದಯ ಸಂಘದ ಪ್ರೇರಕಿಯಾದ ಶ್ರೀಮತಿ ಅಮಿತಾ ಸುಧೀರ್‌ರವರು ದೇವತಾ ಸ್ತೋತ್ರದೊಂದಿಗೆ ಪ್ರಾರ್ಥನೆಯನ್ನು ಮಾಡಿದರು. ಶಾಖಾ ವ್ಯವಸ್ಥಾಪಕರಾದ ಶ್ರೀ ಸದಾಶಿವ ಕೊಠಾರಿ ಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಬ್ಯಾಂಕಿನ ಸಹಾಯಕ ಪ್ರಬಂಧಕರಾದ ಶ್ರೀ ವರದರಾಜ್ ಎಸ್ ಶೆಟ್ಟಿ ರವರು ಬ್ಯಾಂಕಿನಲ್ಲಿ ತೆಗೆದುಕೊಳ್ಳುವ ವಿವಿಧ ಠೇವಣಿಗಳ ಹಾಗೂ ಬ್ಯಾಂಕಿನಿಂದ ವಿತರಿಸುವ ವಿವಿಧ ಸಾಲಗಳ ಹಾಗೂ ವಿಮಾ ಆಧಾರಿತ ಉಳಿತಾಯ ಖಾತೆಯ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಪ್ರದೀಪ್, ಲೀಡ್ ಬ್ಯಾಂಕ್ ಪ್ರತಿನಿಧಿ ಉಡುಪಿ ಇವರು ಬ್ಯಾಂಕಿನಿಂದ ಗ್ರಾಹಕರಿಗೆ ಸಿಗುವ ಕೇಂದ್ರ ಸರಕಾರ ಪ್ರಾಯೋಜಿತ ಸಾಮಾಜಿಕ ಭದ್ರತಾ ಯೋಜನೆಗಳಾದ APY, PMJJBY, PMSBY, PMFBY ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ತಿಳಿಸಿ, ಯಾವುದೇ ಗ್ರಾಹಕರು ಇದನ್ನು ಮಾಡಿಸದೇ ಇದ್ದಲ್ಲಿ ಕಡ್ಡಾಯವಾಗಿ ಈ ಸೌಲಭ್ಯಗಳನ್ನು ಪಡೆಯುವಂತೆ ನೆರೆದ ಎಲ್ಲಾ ಗ್ರಾಹಕರಿಗೆ ತಿಳಿಸಿದರು. ಹಾಗೂ ಶಾಖೆಯಲ್ಲಿ ಸಂಚಯ ಖಾತೆಯನ್ನು ಹೊಂದಿದ ಎಲ್ಲಾ ಗ್ರಾಹಕರು ತಮ್ಮ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಕೊಂಡು ಗ್ಯಾಸ್ ಸಬ್ಸಿಡಿ, ಪೆನ್ಷನ್, ಪಿಎಂ ಕಿಸಾನ್ ಸಮ್ಮಾನ್ ಇತರ ಸರಕಾರದ ಸಬ್ಸಿಡಿ ಸೌಲಭ್ಯವನ್ನು ಪಡೆಯಲು ಅನುಕೂಲವಾಗುವುದೆಂದು ತಿಳಿಸಿದರು. ಹಾಗೂ ಆಧುನಿಕ ತಂತ್ರಜ್ಞಾನ ಮತ್ತು ಸೈಬರ್ ವಂಚನೆಯ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿದರು.

ಈ ಸಭೆಯಲ್ಲಿ ಶಾಖಾ ಸಿಬ್ಬಂದಿಗಳು, ನವೋದಯ ಪ್ರೇರಕಿಯರು, ನಿತ್ಯನಿಧಿ ಸಂಗ್ರಾಹಕರು, ಅಲ್ಲದೇ ನಮ್ಮ ಹಲವಾರು ಗ್ರಾಹಕರು ಆಗಮಿಸಿದ್ದರು. ಶಾಖಾ ಸಿಬ್ಬಂದಿ ಶ್ರೀ ರಾಜೇಶ್ ಶೆಟ್ಟಿ ನಿರೂಪಣೆ ಮಾಡಿ ಬಂದ ಎಲ್ಲಾ ಅತಿಥಿಗಳನ್ನು ಸಭೆಗೆ ಸ್ವಾಗತಿಸಿದರು. ಶಾಖೆಯ ಸಿಬ್ಬಂದಿ ರಾಮಕೃಷ್ಣ, ಸೃಜನ್ ರವರು ಅತಿಥಿಗಳಿಗೆ ಪುಷ್ಪವನ್ನು ನೀಡಿ ಸಭೆಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸ್ವ ಸಹಾಯ ಸಂಘಗಳ ವಲಯ ಮೇಲ್ವಿಚಾರಕರಾದ ಕೃಷ್ಣ ಸಾಲ್ಯಾನ್, ಸಂಘದ ಪ್ರೇರಕರಾದ ಅಮಿತಾ ಸುಧೀರ್, ಸುಮಿತ್ರಾ ಉಪಸ್ಥಿತರಿದ್ದರು. ಶಾಖಾ ಸಿಬ್ಬಂದಿ ಶ್ರೀಮತಿ ಪವಿತ್ರಾ ನೆರೆದಿದ್ದ ಎಲ್ಲಾ ಗ್ರಾಹಕರಿಗೆ ವಂದನಾರ್ಪಣೆ ಮಾಡಿದರು.

Join WhatsApp

Join Now

Join Telegram

Join Now

Read more

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿಯಲ್ಲಿ ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಉದ್ಯಾವರ: ಭಾರತೀಯ ಸಂಸ್ಕೃತಿಯಲ್ಲಿ ಪೀಠೋಪಕರಣಗಳಿಗೆ ವಿಶೇಷ ಮಹತ್ವ – ಉತ್ತಮ ಅರೋಗ್ಯಕ್ಕೂ ಸಮರ್ಪಕ ಪೀಠದ ಅಗತ್ಯವಿದೆ. ಶ್ರೀ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ

ಗಾಂಧೀಜಿಯವರ ಪ್ರಬಲ ಅಸ್ತ್ರ ಸತ್ಯ ಮತ್ತು ಅಹಿಂಸೆ: ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮಾ ಪೂಜಾರಿ

ಸಾಲಿಗ್ರಾಮ: ದುಡಿಯುವುದಕ್ಕೆ ನೀಡುವ ಶ್ರದ್ದೆ ಉಳಿತಾಯಕ್ಕೂ ನೀಡಿ – ಆರ್ಥಿಕ ಅರಿವು ಶಿಬಿರದಲ್ಲಿ ಲೀಡ್ ಬ್ಯಾಂಕ್ ಪ್ರತಿ ನಿಧಿ ಆಶಾಲತಾ ಸಲಹೆ

ಕುಂದಾಪುರ: ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿಯಲ್ಲಿ ಗುರುವಂದಾನ ಕಾರ್ಯಕ್ರಮ

ವಿದ್ಯಾರಣ್ಯ ಅಂಗಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಕರಾವಳಿ ಸೊಗಡಿನ ವೇಷ ಭೂಷಣ,ಶಾಸ್ತ್ರ, ಸಂಪ್ರದಾಯಗಳ ವೈಭವದ ಮೆರವಣಿಗೆ

Leave a Comment