ಉದ್ಯಾವರ: ಭಾರತೀಯ ಸಂಸ್ಕೃತಿಯಲ್ಲಿ ಪೀಠೋಪಕರಣಗಳಿಗೆ ವಿಶೇಷ ಮಹತ್ವ – ಉತ್ತಮ ಅರೋಗ್ಯಕ್ಕೂ ಸಮರ್ಪಕ ಪೀಠದ ಅಗತ್ಯವಿದೆ. ಶ್ರೀ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ

ಉದ್ಯಾವರ: ಭಾರತೀಯ ಸಂಸ್ಕೃತಿಯಲ್ಲಿ ಪೀಠೋಪಕರಣಗಳಿಗೆ ವಿಶೇಷ ಮಹತ್ವ – ಉತ್ತಮ ಅರೋಗ್ಯಕ್ಕೂ ಸಮರ್ಪಕ ಪೀಠದ ಅಗತ್ಯವಿದೆ. ಶ್ರೀ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ

ಉದ್ಯಾವರ: ಕೆ ಕೆ ಲಿವಿಂಗ್ ಫರ್ನಿಚರ್ ಇವರ ನೂತನ ಪೀಠೋಪಕರಣಗಳ ಬೃಹತ್ ಮಾರಾಟ ಮಳಿಗೆ ಸೋಮವಾರದಂದು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಹು ಮಹಡಿ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಉಜ್ವಲ್ ಡೇವಲಪ್ಪರ್ಸ್ ಮಾಲಕರಾದ ಪುರುಷೋತ್ತಮ್ ಶೆಟ್ಟಿ ವಿದ್ಯುಕ್ತವಾಗಿ ಉದ್ಘಾಟಿಸಿ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಶ್ರೀ ವಿದ್ಯಾಸಾಗರ ತೀರ್ಥರು ಉದ್ಘಾಟನೆ ಮಾಡಿದರು.

ಪೀಠೋಪಕರಣಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.
ಪೀಠಗಳಿಗೆ ಧಾರ್ಮಿಕ ಪ್ರಕ್ರಿಯೆಗಳಲ್ಲಿಯೂ ಕೂಡ ವಿಶೇಷವಾದ ಸ್ಥಾನವಿದೆ. ಆರೋಗ್ಯದಲ್ಲೂ ಕೂಡ ಕೆಲವು ಪೀಠಗಳು ಕೆಲವು ಆಸನಗಳಿಗೆ ಸೂಕ್ತವಾಗಿ ಅಗತ್ಯವಿದೆ ಎಂದರು.

ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇದೀಗ ಆನ್ ಲೈನ್ ಮಾರ್ಕೆಟಿಂಗ್ ಯುಗದಲ್ಲಿ ನಮ್ಮ ಮನೆಗೆ ಮತ್ತೆ ಮನಸ್ಸಿಗೆ ಅಗತ್ಯವಿರುವ ಕಲಾಕೃತಿಗಳಿಗೆ ಮನೆಯಲ್ಲಿಯೇ ಕುಳಿತು ನೋಡಿ ಆರ್ಡರ್ ಮಾಡುವಂತ ವ್ಯವಸ್ಥೆ ಇರುವುದ್ದರಿಂದ ಕೆ ಕೆ ಲಿವಿಂಗ್ ಸಂಸ್ಥೆ ಕೂಡ ಇದರ ಪ್ರಯೋಜನದಲ್ಲಿ ಇನ್ನಷ್ಟು ಬೆಳೆದು ಅವಳಿ ಜಿಲ್ಲೆಗಳಲ್ಲಿಯೂ ಶಾಖೆ ಹೊಂದುವತಾಗಲಿ ಎಂದು ಶುಭ ಹಾರೈಸಿದರು.

ಉಡುಪಿ ಮಾಜೀ ಶಾಸಕ ರಘುಪತಿ ಭಟ್ ಮಾತನಾಡಿ ಬೆಳೆಯುತ್ತಿರುವ ಉಡುಪಿ ಜಿಲ್ಲೆಯ ಬಲವರ್ಧನೆಗೆ ಉದ್ಯಾವರದಲ್ಲಿ ಇಂತಹ ಸಂಸ್ಥೆ ಹುಟ್ಟು ಹಾಕಿರುವುದು ಜಿಲ್ಲೆಗೆ ದೊಡ್ಡ ಕೊಡುಗೆ ಎಂದರು.

ಸಭಾ ವೇದಿಕೆಯಲ್ಲಿ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರೊಂದಿಗೆ, ಉಜ್ವಲ್ ಡೇವಲಪ್ಪರ್ಸ್ ಮಾಲಕರಾದ ಪುರುಷೋತ್ತಮ್ ಶೆಟ್ಟಿ,ಜಯಕರ ಶೆಟ್ಟಿ ಇಂದ್ರಾಳಿ, ಪ್ರಭಾಕರ್ ಎಸ್ ಪೂಜಾರಿ,ಶ್ರೀ ಭಗವಾನ್ ದಾಸ್,ರಾಜೀವ್ ಕೋಟ್ಯಾನ್, ಮೊಹಮ್ಮದ್ ಆಜ್ಪಾಕ್ , ನವೀನ್ ಚಂದ್ರ,ಪಾಂಡುರಂಗ ಆಚಾರ್ಯ, ದೇವಿ ಪ್ರಸಾದ್ ಶೆಟ್ಟಿ,ಅಶೋಕ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಪಾಲುದಾರರಾದ ಶ್ರೀ ಪ್ರಕಾಶ್ ಟಿ ಕೋಟ್ಯಾನ್, ಶ್ರೀಮತಿ ಲೀಲಾವತಿ ಕೋಟ್ಯಾನ್, ಪ್ರತೀಕ್ ಕೋಟ್ಯಾನ್, ಕಾರ್ತಿಕ್ ಕೋಟ್ಯಾನ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ತೇಜಸ್ ಬಂಗೇರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

Join WhatsApp

Join Now

Join Telegram

Join Now

Leave a Comment