ಕೋಟ ಹಿರೇಮಹಾಲಿಂಗೇಶ್ವರ ಮಿತ್ರ ವೃಂದ ಇದರ ಸುವರ್ಣ ಸಂಭ್ರಮ. ಗುರು ಕಿರಣ್ ಸಂಗೀತ ಕಾರ್ಯಕ್ರಮ ಸೇರಿ 8 ದಿನಗಳ ಕಾಲ ಸಂಸ್ಕೃತಿಕ ಸಂಭ್ರಮ.

ಕೋಟ ಹಿರೇಮಹಾಲಿಂಗೇಶ್ವರ ಮಿತ್ರ ವೃಂದ ಇದರ ಸುವರ್ಣ ಸಂಭ್ರಮ. ಗುರು ಕಿರಣ್ ಸಂಗೀತ ಕಾರ್ಯಕ್ರಮ ಸೇರಿ 8 ದಿನಗಳ ಕಾಲ ಸಂಸ್ಕೃತಿಕ ಸಂಭ್ರಮ.

ಕೋಟ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಇದರ ರಥೋತ್ಸವದ ಅಂಗವಾಗಿ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರ ವೃಂದ(ರಿ ) ಕೋಟ ಇವರ ವತಿಯಿಂದ ನಡೆಯುವ ಸುವರ್ಣ ಸಂಭ್ರಮ ಕಾರ್ಯಕ್ರಮ ಜನವರಿ 1 ರಿಂದ ಪೆಬ್ರವರಿ 2 ತನಕ ನಡೆಯಲಿದೆ.

ಫೆಬ್ರುವರಿ ಒಂದರಂದು ಕೋಟ ಶ್ರೀ ಹಿರಿ ಮಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ.ಜಾತ್ರೆಯ ಅಂಗವಾಗಿ ಕಳೆದ 50 ವರ್ಷದಿಂದ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರ ವೃಂದ ಕೋಟ ಇವರು ಸತತ ಹಲವು ಸಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬಂದಿರುತ್ತಾರೆ. ಈ ವರ್ಷ 50ನೇ ವರ್ಷದ ಸುವರ್ಣ ಸಂಭ್ರಮದ ಹೊಸ್ತಿಲಿನಲ್ಲಿ ಎಂಟು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜನವರಿ 26ರಂದು ಶಾಂಭವಿ ಶಾಲಾ ಮಕ್ಕಳ ವೈವಿಧ್ಯಮಯ ಕಾರ್ಯಕ್ರಮ,ಜನವರಿ 27ರಂದು ಎಂ.ಡಿ. ಸಿ.ನ್ರತ್ಯ ತಂಡ ಕೋಟ ಇವರಿಂದ ನ್ರತ್ಯ ವೈಭವ, ಜನವರಿ 28 ರಂದು ಹಿರೇಮಹಾಲಿಂಗೇಶ್ವರ ಮಿತ್ರ ವೃಂದದವರಿಂದ ಕಾರ್ಯಕ್ರಮ ವೈವಿದ್ಯ, 29ರಂದು ಅರೆಹೊಳೆ ಪ್ರತಿಷ್ಠಾನ ಇವರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ,ಜನವರಿ 30ರಂದು ದೇವದಾಸ್ ಕಾಫಿಕಾಡ್ ಮಂಗಳೂರು ಇವರಿಂದ ನನ್ನ ಕಥೆ ನೂತನ ನಾಟಕ,ಜನವರಿ 31ರಂದು ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಶಮಿತಾ ಮಲ್ನಾಡ್ ತಂಡದವರಿಂದ ಸಂಗೀತ ರಸಮಂಜರಿ,ಫೆಬ್ರವರಿ ಎರಡರಂದು ಪೆರ್ಡೂರು ಮೇಳದವರಿಂದ ಚದುರಂಗ ಯಕ್ಷಗಾನ ಬಯಲಾಟ, ಫೆಬ್ರವರಿ ಎರಡರಂದು ಕೆ.ಡಿ.ಸಿ..ನಾಟ್ಯ ತಂಡ ಸಾಲಿಗ್ರಾಮ ಇವರಿಂದ ನೃತ್ಯ ವೈಭವ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಎಲ್ಲಾ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕಾಗಿ ವಿನಂತಿಸಿರುತ್ತಾರೆ.

Join WhatsApp

Join Now

Join Telegram

Join Now

Read more

ಕುಂದಾಪುರ: ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ 9ನೇ ರ‍್ಯಾಂಕ್ – ಆಡಳಿತ ಮಂಡಳಿಯಿಂದ 50 ಸಾವಿರ ನಗದು ಪುರಸ್ಕಾರ

ಕುಂದಾಪುರ: ದ್ವಿತೀಯ PUC ಫಲಿತಾಂಶದಲ್ಲಿ ಸುಣ್ಣಾರಿ ಎಕ್ಸಲೆಂಟ್ ವಿದ್ಯಾರ್ಥಿಗಳ ಅಮೋಘ ಸಾಧನೆ. ಆಡಳಿತ ಮಂಡಳಿ ಮತ್ತು ಪೋಷಕರ ಸಂಭ್ರಮ.

ಎಕ್ಸಲೆಂಟ್ ಕಾಲೇಜು, ಸುಣ್ಣಾರಿ, ಕುಂದಾಪುರ: “ರಾಜ್ಯದಲ್ಲಿ ಅತ್ಯುತ್ತಮ ಸಾಧನೆ”

ಕುಂದಾಪುರ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಡೋಣ ಬಾ ಬೇಸಿಗೆ ಶಿಬಿರಕ್ಕೆ ಚಾಲನೆ.ಕ್ರೀಡಾಸಾಧಕರಿಗೆ ಸರಕಾರಿ ಉದ್ಯೋಗ ಅವಕಾಶ – ಕ್ರೀಡಾಪಟು ಪೊಲೀಸ್ ಅಧಿಕಾರಿ ನವೀನ್ ಕಾಂಚನ್

ಬ್ರಹ್ಮಾವರ : ಸುಜ್ಞಾನ ವಿದ್ಯಾ ಸಂಸ್ಥೆ ವಿದ್ಯಾರ್ಥಿವೇತನ ಪರೀಕ್ಷೆ ಉದ್ಘಾಟನೆ : ಅಂಕಗಳಿಕೆ ಜೊತೆಗೆ ಸಾಮಾಜಿಕ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಿ. ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆ

ಬ್ರಹ್ಮಾವರ: ಹೇರಾಡಿ ಹೊಸಳಾದಲ್ಲಿ ಮರಳು ಗಣಿಗಾರಿಕೆ – ಗುತ್ತಿಗೆದಾರರ ಮತ್ತು ನಾಗರೀಕ ನಡುವೆ ಜಟಾಪಟಿ, ಶಾಸಕರ ಹಾಗೂ ಸಂಸದರ ಮೌನ

Leave a Comment