ಅಂದು ಮಲ್ಪೆಯ ವೈರಲ್ ವಾಸು, ಇಂದು ಎದ್ದೇಳಲು ಒಲ್ಲೆ ಎನ್ನುವ ಸ್ಥಿತಿಯಲ್ಲಿ ವಾಸುದೇವ ಮಲ್ಪೆ..!

On: February 14, 2026 10:49 AM
Follow Us:

ಸಾಲಿಗ್ರಾಮ| ಮಲ್ಪೆಯ ನಿವಾಸಿ ವಾಸು ಅಲಿಯಾಸ್ ವೈರಲ್ ವಾಸು ದಶಕದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆದಂತಹ ವ್ಯಕ್ತಿ.

ಮಲ್ಪೆ ಬಂದರಿನಲ್ಲಿ ಕೂಲಿ ಕೆಲಸ ಮಾಡಿ ಕೊಂಡಿದ್ದ ವ್ಯಕ್ತಿ, ಅಮಲು ಪದಾರ್ಥ ಸೇವಿಸಿದ ತಕ್ಷಣ ಸಿನಿಮಾ ನಾಯಕರ ರೀತಿಯಲ್ಲಿ ಡೈಲಾಗ್ ಹೊಡೆಯುತ್ತಿದ್ದರು. ನಂತರದ ದಿನದಲ್ಲಿ ಕೆಲವು ವಿಕೃತ ಮನಸ್ಥಿತಿಯ ಮಂದಿ ಬೆಳ್ಳಂಬೆಳ್ಳಿ ಗೆಯೇ ಅಮಲು ಪದಾರ್ಥ ನೀಡಿ ತಮ್ಮ ವಿರುದ್ಧ ರಾಜಕಾರಣಿಗಳಿಗೆ ಬೈಗುಳ ಹೇಳಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟು ಖುಷಿ ಪಟ್ಟು ಕೊಳ್ಳುತ್ತಿದ್ದರು. ಹೀಗೆ ಇವರ ಜನಪ್ರಿಯತೆ ಬೆಳೆಯುತ್ತಾ ಕೆಲವು ತುಳು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.

ದುಶ್ಚಟಕ್ಕೆ ಬಲಿಯಾಗಿ ಮನೆ ಮಂದಿಯನ್ನು ಮರೆತು ಒಂಟಿ ಜೀವನ ಕಳೆಯುತ್ತಿದ್ದರು.
ಒಬ್ಬ ವ್ಯಕ್ತಿ ಸಮಾಜದಲ್ಲಿ ದಾರಿ ತಪ್ಪಿದಾಗ ಬುದ್ದಿ ಹೇಳುವ ಜನ ಕಡಿಮೆ. ಆತನ ದೌರ್ಬಲ್ಯವನ್ನೇ ತಮ್ಮ ಬಂಡವಾಳ ಮಾಡಿ ಕೊಳ್ಳುವ ಮಂದಿ ಅಧಿಕ.
ಒಂದು ವರ್ಷದಿಂದ ಅನಾರೋಗ್ಯಕ್ಕಿಡಾದಾಗ ಯಾರೂ ಕೈ ಹಿಡಿಯದಾದರು.
ದುಡಿಯಲು ಆಗದೇ ಮಾತು ಕೂಡ ಆಡಲು ಕಷ್ಟ ಅನಿಸಿದಾಗ, ಆಪತ್ಬಾಂಧವ ಈಶ್ವರ ಮಲ್ಪೆ ಅವರು ಚಿಕಿತ್ಸೆ ನೀಡಿ ಸಾಲಿಗ್ರಾಮದ ಹೊಸಬೆಳಕು ಆಶ್ರಮಕ್ಕೆ ಕರೆ ತಂದರು.

ಇದೀಗ ಎದ್ದೇಳಲು ಆಗದ ಸ್ಥಿಯಲ್ಲಿದ್ದರೂ ಕೂಡ ಆಶ್ರಮದವರು ಚಿಕಿತ್ಸೆ ಮತ್ತು ಉಟೋಪಚಾರ ನೀಡಿ ಆರೈಕೆ ಮಾಡುತ್ತಿದ್ದಾರೆ.

Join WhatsApp

Join Now

Join Telegram

Join Now

Read more

ಅಮಾಸೆಬೈಲಿನಲ್ಲಿ 14 ಕೊರಗ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ: ಸಮಾಜ ಸೇವೆಯಲ್ಲಿ ಎಚ್. ಎಸ್. ಆರ್. ಶೆಟ್ಟಿಯವರ ಮಹತ್ವಾಕಾಂಕ್ಷಿ ಹೆಜ್ಜೆ – ಪೇಜಾವರ ಶ್ರೀ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನಿಂದ 205 ಶಾಲೆಗಳಿಗೆ ಬೆಂಚ್-ಡೆಸ್ಕ್ ವಿತರಣೆ: ಹೊನ್ನವಳ್ಳಿಯಲ್ಲಿ ಸಚಿವ ವಿ.ಸೋಮಣ್ಣರಿಂದ ಹಸ್ತಾಂತರ

ಸಾಲಿಗ್ರಾಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರರ ಮಹಾಪೂಜೆ : ಕುಟುಂಬ ಸಮೇತ ಶ್ರೀ ಗುರುನರಸಿಂಹ ಸ್ವಾಮಿಗೆ ವಿಶೇಷ ಸೇವೆ

ಪ್ರಕೃತಿ ಮಡಿಲಿನಲ್ಲಿ ನಾಯಕತ್ವದ ಪಾಠ: ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಸ್ಕೌಟ್ಸ್ ದಿನಾಚರಣೆ: ಸೌಹಾರ್ದಿತ ವಾತಾವರಣ ನಿರ್ಮಾಣವೇ ಸ್ಕೌಟ್ಸ್ & ಗೈಡ್ಸ್ ಮೂಲ ಉದ್ದೇಶ. ಇಂದ್ರಾಳಿ ಜಯಕರ್ ಶೆಟ್ಟಿ

ವಿದ್ಯಾರಣ್ಯ ಶಿಶು ವಿಹಾರದಲ್ಲಿ ಪದವಿ ಪ್ರದಾನ: ಆತ್ಮವಿಶ್ವಾಸ ಹೆಚ್ಚಿಸುವ ಶಿಕ್ಷಣ ಅಗತ್ಯ. ಕಾಂತರ ಕಮಲ ಖ್ಯಾತಿಯ ಮಾನಸಿ ಸುಧೀರ್.

ಪುನರ್ಜನ್ಮ ಪಡೆದ ‘ಯಕ್ಷ ಚಂದ್ರಿಕೆ’: ಮಂದಾರ್ತಿ ರಥೋತ್ಸವದಲ್ಲಿ ಮತ್ತೆ ಗೆಜ್ಜೆ ಕಟ್ಟಿದ ಶಶಿಕಾಂತ್ ಶೆಟ್ಟಿ!

Leave a Comment