ಅಮಾಸೆಬೈಲಿನಲ್ಲಿ 14 ಕೊರಗ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ: ಸಮಾಜ ಸೇವೆಯಲ್ಲಿ ಎಚ್. ಎಸ್. ಆರ್. ಶೆಟ್ಟಿಯವರ ಮಹತ್ವಾಕಾಂಕ್ಷಿ ಹೆಜ್ಜೆ – ಪೇಜಾವರ ಶ್ರೀ

ಅಮಾಸೆಬೈಲಿನಲ್ಲಿ 14 ಕೊರಗ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ: ಸಮಾಜ ಸೇವೆಯಲ್ಲಿ ಎಚ್. ಎಸ್. ಆರ್. ಶೆಟ್ಟಿಯವರ ಮಹತ್ವಾಕಾಂಕ್ಷಿ ಹೆಜ್ಜೆ – ಪೇಜಾವರ ಶ್ರೀ


ಅಮಾಸೆಬೈಲು, ಫೆ.26: ಉಡುಪಿ ಜಿಲ್ಲೆಯ ಅಮಾಸೆಬೈಲಿನಲ್ಲಿ ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ನಿರ್ಮಾಣ ಯೋಜನೆಗೆ ಭೂಮಿ ಪೂಜೆ ಕಾರ್ಯಕ್ರಮವು ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಸಮಾಜದ ಅತಿ ಕೆಳಸ್ತರದಲ್ಲಿ ಗುರುತಿಸಲ್ಪಟ್ಟಿರುವ ಕೊರಗ ಸಮುದಾಯದ ಜೀವನಮಟ್ಟವನ್ನು ಉತ್ತೇಜಿಸುವ ಉದ್ದೇಶದಿಂದ ಹಾಲಾಡಿಯ ಉದ್ಯಮಿ ಡಾ. ಹಾಲಾಡಿ ಶ್ರೀನಿವಾಸ ಶೆಟ್ಟಿಯವರು 14 ಕುಟುಂಬಗಳಿಗೆ ಮನೆ ನಿರ್ಮಿಸಿ ನೀಡುವ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ಶ್ರೀಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳು ಭೂಮಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಉಡುಪಿ ಶ್ರೀ ಕೃಷ್ಣನ ಪ್ರೇರಣೆಯಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಶ್ರೀನಿವಾಸ ಶೆಟ್ಟಿಯವರ ಸೇವಾಭಾವ ಪ್ರಶಂಸನೀಯವಾಗಿದ್ದು, ಈಗಾಗಲೇ 28 ಕೊರಗ ಕುಟುಂಬಗಳಿಗೆ ಮನೆ ನಿರ್ಮಿಸಿ ಹಸ್ತಾಂತರಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಭಗವಂತನು ಅವರಿಗೆ ನೀಡಲಿ ಎಂದು ಆಶಿಸಿದರು.

ಶ್ರೀಯುತ ಎಚ್. ಎಸ್. ಆರ್. ಶೆಟ್ಟಿ ಸ್ವಾಗತ ಭಾಷಣ ಮಾಡಿ, 100 ಮನೆಗಳ ನಿರ್ಮಾಣ ಗುರಿ ಹೊಂದಿರುವುದಾಗಿ ತಿಳಿಸಿದರು. ಭಗವಂತನ ಕೃಪೆಯಿಂದ ಸಾವಿರ ಮನೆಗಳನ್ನು ನಿರ್ಮಿಸುವ ಆಶಯವೂ ಹೊಂದಿರುವುದಾಗಿ ಅವರು ಹೇಳಿದರು. ಸಮಾಜದಲ್ಲಿ ಇನ್ನೂ ಅನೇಕ ಕೊರಗ ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದನ್ನು ಉಲ್ಲೇಖಿಸಿದರು.

ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಸದ ಶ್ರೀನಿವಾಸ ಪೂಜಾರಿ, ಕಮಲಶಿಲೆ ದೇವಸ್ಥಾನದ ಸಚ್ಚಿದಾನಂದ ಚಾತ್ರ, ಮಾದರ ಚೆನ್ನಯ್ಯ ಆಶ್ರಮದ ಟ್ರಸ್ಟೀ ದಾನಪ್ಪ, ಮುರುಳಿ ಕಡೇಕಾರ್, ಪಿಡಿಒ ಸ್ವಾಮೀನಾಥ್, ಕುಮಾರ್ ದಾಸ್, ನಾಗರಾಜ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪತ್ರಕರ್ತ ಸತೀಶ್ ಸಿದ್ದಾಪುರ ಕಾರ್ಯಕ್ರಮವನ್ನು ನಿರೂಪಿಸಿದರು.

Join WhatsApp

Join Now

Join Telegram

Join Now

Read more

ಕುಂದಾಪುರ: ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿಯಲ್ಲಿ ಗುರುವಂದಾನ ಕಾರ್ಯಕ್ರಮ

ವಿದ್ಯಾರಣ್ಯ ಅಂಗಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಕರಾವಳಿ ಸೊಗಡಿನ ವೇಷ ಭೂಷಣ,ಶಾಸ್ತ್ರ, ಸಂಪ್ರದಾಯಗಳ ವೈಭವದ ಮೆರವಣಿಗೆ

ಕೋಟ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ರಘು ಮಧ್ಯಸ್ಥ ಅವಿರೋಧ ಆಯ್ಕೆ

ಸುಜ್ಞಾನ ವಿದ್ಯಾ ಸಂಸ್ಥೆಯಲ್ಲಿ ‘ವಾಲ್ಬೆಲ್ಲ’ ಕುಂದಾಪ್ರ ಕನ್ನಡದ ಸಂಸ್ಕೃತಿ ಸಮಾರಂಭದ ಸಮಾರೋಪ: ಯುವಜನತೆ ದುಶ್ಚಟಗಳಿಂದ ದೂರವಿದ್ದು ಗುರಿಯತ್ತ ಸಾಗಬೇಕು – ಕೆ. ಜಯಪ್ರಕಾಶ್ ಹೆಗ್ಡೆ

ಸುಜ್ಞಾನದಂಗಳದಿ ವಾಲ್ಬೆಲ್ಲದ ಸವಿ ಸಂಭ್ರಮ: ಕುಂದಾಪ್ರ ಕನ್ನಡದ ಅಭಿವೃದ್ಧಿಗೆ ದಿಟ್ಟ ಹೆಜ್ಜೆ: ಕುಂದಾಪ್ರ ಕನ್ನಡದ ಸವಿ ಉಳಿಸಿ ಬೆಳಸುವ ಜವಾಬ್ದಾರಿ ನಮ್ಮದು.ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ

ವಿದ್ಯಾರಣ್ಯ ಶಾಲೆ ಯಡಾಡಿ – ಮತ್ಯಾಡಿಯಲ್ಲಿ ಜುಲೈ 6 ರಂದು ಕುಂದಾಪ್ರ ಕನ್ನಡ ‘ವಾಲ್ಪೆಲ್ಲ’ ಕಾರ್ಯಕ್ರಮ: ಕುಂದಾಪ್ರ ಕನ್ನಡದ ಅಭಿಮಾನ ಬೆಳೆಸಿ ಕೊಳ್ಳ ಬೇಕು – ಕೆ. ಜಯಪ್ರಕಾಶ್ ಹೆಗ್ಡೆ

Leave a Comment