ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನಿಂದ 205 ಶಾಲೆಗಳಿಗೆ ಬೆಂಚ್-ಡೆಸ್ಕ್ ವಿತರಣೆ: ಹೊನ್ನವಳ್ಳಿಯಲ್ಲಿ ಸಚಿವ ವಿ.ಸೋಮಣ್ಣರಿಂದ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನಿಂದ 205 ಶಾಲೆಗಳಿಗೆ ಬೆಂಚ್-ಡೆಸ್ಕ್ ವಿತರಣೆ: ಹೊನ್ನವಳ್ಳಿಯಲ್ಲಿ ಸಚಿವ ವಿ.ಸೋಮಣ್ಣರಿಂದ ಹಸ್ತಾಂತರ

ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಕನ್ನಡ ಭಾರತಿ ಪ್ರೌಡಶಾಲಾ ಮಕ್ಕಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಮಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಮಂಜೂರು ಮಾಡಿದ ಬೆಂಚು ಡೆಸ್ಕ್ ಗಳನ್ನು ಭಾರತ ಸರಕಾರಕಾರದ ಕೇಂದ್ರ ಜಲಶಕ್ತಿ ಹಾಗೂ ರಾಜ್ಯ ರೈಲ್ವೇ ಸಚಿವರಾದ ಸನ್ಮಾನ್ಯ ವಿ.ಸೋಮಣ್ಣ ಹಾಗೂ ತಾಲ್ಲೂಕು ಉಪವಿಭಾಗಾಧಿಕಾರಿಗಳಾದ ಸಪ್ತಶ್ರೀ ರವರ ನೇತೃತ್ವದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು ಪರಮಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಸರಕಾರದ ಕಾರ್ಯಕ್ರಮಗೊಳೊಟ್ಟಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು ಸಮಾಜಮುಖಿ ಕಾರ್ಯಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪಾಲು ಇದ್ದೇ ಇರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಕ್ಷೇತ್ರದ ಸಮುದಾಯ ಅಭಿವೃದ್ಧಿ ಸೇವೆಗಳ ಭಾಗವಾಗಿ ತುಮಕೂರು ಜಿಲ್ಲೆಯ ಒಟ್ಟು 205 ಶಾಲೆಗಳಿಗೆ 1540 ಜೊತೆ ಬೆಂಚ್ ಡೆಸ್ಕ್ ವಿತರಣೆಗೆ ರೂ 1 ಕೋಟಿ 39 ಲಕ್ಷ ಮೊತ್ತವನ್ನು ವಿನಿಯೋಗಿಸಿರುವುದು ಶ್ಲಾಘನೀಯವೆಂದರು.

ಈ ದಿನ ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ಕನ್ನಡ ಭಾರತಿ ಪ್ರೌಢ ಶಾಲೆಗೆ 10 ಜೊತೆ ಬೆಂಚ್ ಡೆಸ್ಕ್ ಗಳು ದೊರೆತಿದ್ದು ಇವುಗಳ ಸದುಪಯೋಗವನ್ನು ಈಗಿನ ಹಾಗೂ ಮುಂದಿನ ಪೀಳಿಗೆಯ ಶಾಲಾಮಕ್ಕಳು ಸದುಪಯೋಗಪಡೆಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ತರಕಾರಿ ಗಂಗಾಧರ್, ಮಲ್ಲಿಗಪ್ಪಾಚಾರ್, ತಾಲ್ಲೂಕು ಯೋಜನಾಧಿಕಾರಿ ಉದಯ್.ಕೆ,ಶಾಲಾ ಮುಖ್ಯೋಪಾದ್ಯಾಯರಾದ ಆನಂದ್,ಗ್ರಾ.ಪಂ.ಮಾಜಿ ಅದ್ಯಕ್ಷರು ಶ್ರೀಕಂಠಮೂರ್ತಿ,ಹೊನ್ನಾಂಭಿಕಾ ದೇವಿ ಟ್ರಸ್ಟ್ ಅದ್ಯಕ್ಷರು ಮಹಲಿಂಗಪ್ಪ,ರೈತ ಮುಖಂಡರಾದ ಮುಪ್ನೇಗೌಡ,ಶಾಲಾ ಸಹ ಶಿಕ್ಷಕರು,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು,ಹೊನ್ನವಳ್ಳಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Join WhatsApp

Join Now

Join Telegram

Join Now

Read more

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹5 ಲಕ್ಷ ಅನುದಾನ ಮಂಜೂರು; ಅಜಿತ್ ಕುಮಾರ್ ಶೆಟ್ಟಿ ಮನವಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಂದನೆ

ಉಡುಪಿ: ಬೈಂದೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮರಳಿ ಆರೋಗ್ಯ ಇಲಾಖೆಗೆ. ತತ್ ಕ್ಷಣ ಜಾರಿಗೆ ಆದೇಶ.

ಸುಜ್ಞಾನದಂಗಳದಲ್ಲಿ ಮಂಥನ-2026 ಬೇಸಿಗೆ ಶಿಬಿರ ಶುಭಾರಂಭ: ಮಕ್ಕಳಲ್ಲಿರುವ ಪ್ರತಿಭೆಗನುಗುಣವಾಗಿ ಪೋಷಕರ ಪ್ರೋತ್ಸಾಹ ಅಗತ್ಯ – ಜಯಪ್ರಕಾಶ್ ಹೆಗ್ಡೆ

ಸಿದ್ದಾಪುರ: ಜ್ಞಾನ ಸರಸ್ವತಿ ಶಿಕ್ಷಣ ಸಂಸ್ಥೆಗೆ SSLC ಯಲ್ಲಿ 100 ಫಲಿತಾಂಶ. ಸಾಧನೆಗೈದ ವಿದ್ಯಾರ್ಥಿನಿಗೆ 25 ಸಾವಿರ ಪ್ರೋತ್ಸಾಹ ಧನ

ಬ್ರಹ್ಮಾವರ: ಭಕ್ತಿ ಭಾವದ ಸಿರಿ ಸಿಂಗಾರ ಕೋಲಾ ಸೇವೆ : ಸುಗ್ಗಿ ಸುಧಾಕರ್ ಶೆಟ್ಟಿ ನಿವಾಸದಲ್ಲಿ ಕೇಮಾರು ಈಶ ವಿಠಲ ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿ

ಸುಣ್ಣಾರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಬೆಸುಗೆ-2026’ ಬೇಸಿಗೆ ಶಿಬಿರಕ್ಕೆ ಚಾಲನೆ: ​ಸೃಜನಾತ್ಮಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಚೆಸ್ ಕ್ರೀಡಾಪಟು ಆರಾಧ್ಯ ಶೆಟ್ಟಿ

Leave a Comment