ಮಂಗಳೂರಿನಲ್ಲಿ ನಡೆದ 76ನೇ ಭಾರತೀಯ ದಂತ ವೈದ್ಯರ ಸಮಾವೇಶ: IDA ಉಡುಪಿ ಘಟಕಕ್ಕೆ 6 ರಾಷ್ಟ್ರೀಯ ಪ್ರಶಸ್ತಿಗಳು

ಮಂಗಳೂರು, ಫೆ.10:
ಮಂಗಳೂರಿನಲ್ಲಿ ನಡೆದ 76ನೇ ಭಾರತೀಯ ದಂತ ವೈದ್ಯರ ಸಮಾವೇಶದಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ (IDA) ಉಡುಪಿ ಘಟಕವು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. IDA ಉಡುಪಿ ಘಟಕದ ಮೊದಲ ಮಹಿಳಾ ಅಧ್ಯಕ್ಷೆ ಡಾ. ಯು.ಬಿ. ಶಬರಿ ಅವರ ನೇತೃತ್ವದ ತಂಡವು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಟ್ಟು ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
