ಕೋಟ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ರಘು ಮಧ್ಯಸ್ಥ ಅವಿರೋಧ ಆಯ್ಕೆ

ಕೋಟ: ಸಹಕಾರಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಳ ಮೂಲಕ ಗುರುತಿಸಿಕೊಂಡಿರುವ ಕೋಟ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕರ ಮಂಡಳಿಯ ತೆರವಾದ ಸ್ಥಾನಕ್ಕೆ ರಘು ಮಧ್ಯಸ್ಥ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿದ್ದ ನಾಗರಾಜ್ ಹಂದೆ ಅವರ ನಿಧನದಿಂದ ನಿರ್ದೇಶಕರ ಮಂಡಳಿಯಲ್ಲಿ ಒಂದು ಸ್ಥಾನ ತೆರವಾಗಿತ್ತು. ಸಹಕಾರಿ ಕಾಯ್ದೆಯ ನಿಯಮಾನುಸಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಘು ಮಧ್ಯಸ್ಥ ಅವರನ್ನು ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆಯ ವೇಳೆ ಸಂಘದ ಅಧ್ಯಕ್ಷ ಕೃಷ್ಣ ಕಾಂಚನ್, ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ, ಪ್ರಧಾನ ವ್ಯವಸ್ಥಾಪಕ (ಜಿಎಂ) ಶರತ್ ಕುಮಾರ್ ಶೆಟ್ಟಿ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದು, ನೂತನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.

ರಘು ಮಧ್ಯಸ್ಥ ಅವರ ಸೇರ್ಪಡೆಯಿಂದ ಸಂಘದ ಆಡಳಿತ ಮತ್ತಷ್ಟು ಬಲಗೊಂಡು, ಸದಸ್ಯರು ಹಾಗೂ ರೈತಪರ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯುವ ವಿಶ್ವಾಸವನ್ನು ಆಡಳಿತ ಮಂಡಳಿ ವ್ಯಕ್ತಪಡಿಸಿದೆ.

Join WhatsApp

Join Now

Join Telegram

Join Now

Read more

ಸುಜ್ಞಾನ ವಿದ್ಯಾ ಸಂಸ್ಥೆಯಲ್ಲಿ ‘ವಾಲ್ಬೆಲ್ಲ’ ಕುಂದಾಪ್ರ ಕನ್ನಡದ ಸಂಸ್ಕೃತಿ ಸಮಾರಂಭದ ಸಮಾರೋಪ: ಯುವಜನತೆ ದುಶ್ಚಟಗಳಿಂದ ದೂರವಿದ್ದು ಗುರಿಯತ್ತ ಸಾಗಬೇಕು – ಕೆ. ಜಯಪ್ರಕಾಶ್ ಹೆಗ್ಡೆ

ಸುಜ್ಞಾನದಂಗಳದಿ ವಾಲ್ಬೆಲ್ಲದ ಸವಿ ಸಂಭ್ರಮ: ಕುಂದಾಪ್ರ ಕನ್ನಡದ ಅಭಿವೃದ್ಧಿಗೆ ದಿಟ್ಟ ಹೆಜ್ಜೆ: ಕುಂದಾಪ್ರ ಕನ್ನಡದ ಸವಿ ಉಳಿಸಿ ಬೆಳಸುವ ಜವಾಬ್ದಾರಿ ನಮ್ಮದು.ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ

ವಿದ್ಯಾರಣ್ಯ ಶಾಲೆ ಯಡಾಡಿ – ಮತ್ಯಾಡಿಯಲ್ಲಿ ಜುಲೈ 6 ರಂದು ಕುಂದಾಪ್ರ ಕನ್ನಡ ‘ವಾಲ್ಪೆಲ್ಲ’ ಕಾರ್ಯಕ್ರಮ: ಕುಂದಾಪ್ರ ಕನ್ನಡದ ಅಭಿಮಾನ ಬೆಳೆಸಿ ಕೊಳ್ಳ ಬೇಕು – ಕೆ. ಜಯಪ್ರಕಾಶ್ ಹೆಗ್ಡೆ

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹5 ಲಕ್ಷ ಅನುದಾನ ಮಂಜೂರು; ಅಜಿತ್ ಕುಮಾರ್ ಶೆಟ್ಟಿ ಮನವಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಂದನೆ

ಉಡುಪಿ: ಬೈಂದೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮರಳಿ ಆರೋಗ್ಯ ಇಲಾಖೆಗೆ. ತತ್ ಕ್ಷಣ ಜಾರಿಗೆ ಆದೇಶ.

ಸುಜ್ಞಾನದಂಗಳದಲ್ಲಿ ಮಂಥನ-2026 ಬೇಸಿಗೆ ಶಿಬಿರ ಶುಭಾರಂಭ: ಮಕ್ಕಳಲ್ಲಿರುವ ಪ್ರತಿಭೆಗನುಗುಣವಾಗಿ ಪೋಷಕರ ಪ್ರೋತ್ಸಾಹ ಅಗತ್ಯ – ಜಯಪ್ರಕಾಶ್ ಹೆಗ್ಡೆ

Leave a Comment