ದಾವಣಗೆರೆ ಬೈ ಎಲೆಕ್ಷನ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ವಡ್ಡರ್ಸೆ ನೇಮಕ.

ದಾವಣಗೆರೆ : ಕರ್ನಾಟಕದಲ್ಲಿ ಬಾಗಲಕೋಟೆಯ ಮೇಟಿ ಮತ್ತು ದಾವಣಗೆರೆಯ ಶಾಮನೂರು ಶಿವಶಂಕರಪ್ಪ ನಿಧನದಿಂದ ಈ ಎರಡು ವಿಧಾನ ಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದೆ.
ದಾವಣಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಾಮನೂರು ಕುಟುಂಬದ ಸಮರ್ಥ ಶಾಮನೂರು ಸ್ಪರ್ಧೆ ನೀಡುತ್ತಿದ್ದಾರೆ.
ಬಿಜೆಪಿಗೆ ಶ್ರೀನಿವಾಸ ಟಿ ದಾಸಕರಿಯಪ್ಪ ಪ್ರತಿ ಸ್ಪರ್ಧಿಯಾಗಿದ್ದು ಚುನಾವಣೆ ಕಣ ರೋಚಕವಾಗಿ ಗಮನ ಸೇಳಿದಿದೆ.
ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕಾರ್ಯತಂತ್ರದ ನೇರವು ನೀಡಲು ನುರಿತ ಉಸ್ತುವಾರಿಗಳನ್ನು ನೇಮಿಸುವುದು ವಾಡಿಕೆ.
ಹಾಗೆಯೇ ಕರಾವಳಿ ಭಾಗದ ಕಾಂಗ್ರೆಸ್ ಪಕ್ಷದ ಪ್ರಭಾವಿ ಯುವ ಕಾಂಗ್ರೆಸ್ ನಾಯಕ ಅಜಿತ್ ಶೆಟ್ಟಿ ವಡ್ಡರ್ಸೆ ಇವರನ್ನು ದಾವಣಗೆರೆ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಿ ಆದೇಶ ನೀಡಲಾಗಿದೆ.
ಯುವ ಕಾಂಗ್ರೆಸ್ ಘಟಕದ ಮಂಜುನಾಥ್ ಗೌಡ ಈ ಆದೇಶ ನೀಡಿದ್ದು, ಆದಷ್ಟು ಬೇಗ ಚುನಾವಣಾ ಕಣದಲ್ಲಿ ಸೇವೆ ಮಾಡುವಂತೆ ತಿಳಿಸಿರುತ್ತಾರೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಕೆಪಿಸಿಸಿ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಗಳಿಗೆ, ರಾಜ್ಯ ಉಸ್ತುವಾರಿಯಾದ ನಿಗಮ್ ಭಂಡಾರಿ ಜಿ ಅವರಿಗೆ ಅಜಿತ್ ಶೆಟ್ಟಿ ವಡ್ಡರ್ಸೆ ಧನ್ಯವಾದ ಸಲ್ಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಸೇವೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
