ಸುಜ್ಞಾನದಂಗಳದಲ್ಲಿ ಮಂಥನ-2026 ಬೇಸಿಗೆ ಶಿಬಿರ ಶುಭಾರಂಭ: ಮಕ್ಕಳಲ್ಲಿರುವ ಪ್ರತಿಭೆಗನುಗುಣವಾಗಿ ಪೋಷಕರ ಪ್ರೋತ್ಸಾಹ ಅಗತ್ಯ – ಜಯಪ್ರಕಾಶ್ ಹೆಗ್ಡೆ

ಬಿದ್ಕಲ್ ಕಟ್ಟೆ : ಯಡ್ಯಾಡಿ ಮತ್ಯಾಡಿಯ ಸುಜ್ಞಾನ ಪಿಯು ಕಾಲೇಜ್ ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಮಂಥನ ಬೇಸಿಗೆ ಶಿಬಿರ ಏಪ್ರಿಲ್ 26 ರಿಂದ ಮೇ 2 ರವರೆಗೆ ನಡೆಯಲಿದ್ದು,ಇದರ ಉದ್ಘಾಟನೆ ಭಾನುವಾರದಂದು ನಡೆಯಿತು.
ಸಭಾ ಕಾರ್ಯಕ್ರಮವನ್ನು ಮಾಜೀ ಸಂಸದರು ಮತ್ತು ಪ್ರಭುದ್ದ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.

ಇಂದಿನ ಯುಗದಲ್ಲಿ ಮಕ್ಕಳನ್ನು ಕೇವಲ ಶಿಕ್ಷಣಕ್ಕೆ ಸೀಮಿತಗೊಳಿಸದೇ ಕ್ರೀಡೆ ಮತ್ತು ಕಲೆಯಲ್ಲಿಯೂ ಕೂಡ ಭಾಗವಹಿಸಲು ಪೋಷಕರು ಪ್ರೇರೆಪೀಸ ಬೇಕು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಕೂಡ ಕ್ರೀಡಾ ಸಾಧಕರಿಗೆ ವಿಶೇಷವಾದ ಮೀಸಲಾತಿ ಇರುವುದು ಕೂಡ ಗಮನರ್ಹವಾಗಿದೆ. ಮಕ್ಕಳಲ್ಲಿರುವ ಆಸಕ್ತಿಯನ್ನು ಪೋಷಕರು ಗುರುತಿಸಿ ಪ್ರೋತ್ಸಾಹಿಸ ಬೇಕು.
ಮಕ್ಕಳ ದಿನಚರಿ ಬಗ್ಗೆಯೂ ಪೋಷಕರು ನಿಗಾವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಬೆಟ್ಟಿಂಗ್ ಮತ್ತು ಡ್ರಗ್ಸ್ ವಿಷಯದಲ್ಲಿ ಮಕ್ಕಳು ಬಲಿಯಾಗುತ್ತಿರುವುದು ವಿಷಾದನೀಯ. ಪೋಷಕರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಚಲನಚಿತ್ರ ನಟಿ ಶ್ರುತಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನುದ್ದೇಶಿಸಿ ಮಾತನಾಡಿ
ಇಂದು ಎಲ್ಲೆಡೆ ಉಚಿತ ಉಚಿತ ಎನ್ನುವುದು ಸಾಮಾನ್ಯ.
ಅನ್ನವನ್ನು ಉಚಿತವಾಗಿ ನೀಡಿದರೆ ಒಂದು ಹೊತ್ತು ಹೊಟ್ಟೆ ತುಂಬಬಹುದು. ಆದರೆ ಅಕ್ಷರ ಉಚಿತವಾಗಿ ನೀಡಿದರೆ ವ್ಯಕ್ತಿಯ ಭವಿಷ್ಯ ಬಂಗಾರವಾಗಬಲ್ಲದು ಎಂದರು. ಮಕ್ಕಳಿಗೆ ಅಂಕದ ವಿಷಯ ಮಾತ್ರವಲ್ಲದೇ,ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವ ಮೂಲಕ ಅವರನ್ನು ಈ ದೇಶದ ಆಸ್ತಿಯನ್ನಾಗಿಸಿ.
ಡಾ ರಾಜಕುಮಾರ ಅವರು ಕೇವಲ ನಾಲ್ಕನೇ ತರಗತಿ ಶಿಕ್ಷಣ ಪಡೆದವರು. ಆದರೆ ಇಂದು ಇಡೀ ಕರ್ನಾಟಕ ಅವರನ್ನು ಗೌರವಿಸುತ್ತೆ. ಕಾರಣ ಅವರಿಗೆ ಸಿಕ್ಕಿದ ಸಂಸ್ಕಾರ ಮತ್ತು ಅವರ ಅನುಭವದಿಂದ ಇಂದು ಅವರು ಮೇರು ವ್ಯಕ್ತಿಯಾದರು.
ಇಂದು ಸುಜ್ಞಾನ ವಿದ್ಯಾ ಸಂಸ್ಥೆ ಆಯೋಜಿಸಿರುವ ಬೇಸಿಗೆ ಶಿಬಿರದ ಪ್ರಯೋಜನ ಪ್ರತಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿ ಎಂದು ಶುಭ ಹಾರೈಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾದ ಆನಂದ್ ಪಿ. ಇವರು ಸುಜ್ಞಾನ ವಿದ್ಯಾ ಸಂಸ್ಥೆಯ ಸನ್ಮಾನ ಸ್ವೀಕರಿಸಿ, 95% ಅಂಕ ವಿದ್ಯಾರ್ಥಿಯಲ್ಲಿ 97% ಅಂಕ ತೆಗೆಸೋದು ಸಾಧನೆ ಅಲ್ಲ. ಕನಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಗರಿಷ್ಠ ಅಂಕ ಬರುವಂತೆ ಮಾಡುವುದು ಸಾಧನೆ. ಅದು ಸುಜ್ಞಾನ ವಿದ್ಯಾ ಸಂಸ್ಥೆ ಆ ಸಾಧನೆ ಮಾಡುತ್ತಿರುವುದು ಅಭಿನಂದನಿಯ. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಮೈದಾನಲ್ಲಿಯೂ ಕೂಡ
ಸಾಧನೆ ಮಾಡಿ ಜಗತ್ತಿನಲ್ಲಿ ಗುರುತಿಸಿ ಕೊಳ್ಳಬೇಕು ಎಂದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಅವರು ಸಭಾಧ್ಯಕ್ಷತೆವಹಿಸಿ, ಮಾತನಾಡಿ ಎಲ್ಲೆಡೆಯಿಂದ 1500 ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. 21 ನಮೂನೆಯ ವೈವಿಧ್ಯಮಯ ಚಟುವಟಿಕೆ ಆಯೋಜಿಸಲಾಗಿದೆ. ಕಂಬಳ, ಯಕ್ಷಗಾನ, ಕೆಸರುಗದ್ದೆ ಕ್ರೀಡೆ, ಬೂಟ್ ಕ್ಯಾಂಪ್, ಕುಕ್ಕಿಂಗ್ ತರಬೇತಿ ಸೇರಿದಂತೆ 50 ಕ್ಕೂ ಹೆಚ್ಚು ನುರಿತ ತರಬೇತುದಾರರಿಂದ ಮಾಹಿತಿ ಮತ್ತು ಪ್ರಾತ್ಯಕ್ಷತೆ ನೀಡಲಾಗುವುದು ಎಂದರು.

ಮುಖ ಅತಿಥಿಗಳಾಗಿ ಅಂತಾರಾಷ್ಟ್ರೀಯ ಖ್ಯಾತಿ ಜಾದೂಗಾರಾದ ಕುದ್ರೋಳಿ ಗಣೇಶ್ ವೇದಿಕೆಯಲ್ಲಿ ಜಾದೂ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಿದರು.
ಉದ್ಯಮಿ ಅರುಣ್ ಕುಮಾರ್, ಹೆಸರಾಂತ ನ್ರತ್ಯ ನಿರ್ದೇಶಕ ರವಿ ಮಾಸ್ಟರ್, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದು, ಕೋಶಾಧಿಕಾರಿ ಭರತ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ವಿನಯ್ ನಿರೂಪಿಸಿದರು.ಮ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ ಧನ್ಯವಾದ ಸಲ್ಲಿಸದರು.

Join WhatsApp

Join Now

Join Telegram

Join Now

Read more

ಸಿದ್ದಾಪುರ: ಜ್ಞಾನ ಸರಸ್ವತಿ ಶಿಕ್ಷಣ ಸಂಸ್ಥೆಗೆ SSLC ಯಲ್ಲಿ 100 ಫಲಿತಾಂಶ. ಸಾಧನೆಗೈದ ವಿದ್ಯಾರ್ಥಿನಿಗೆ 25 ಸಾವಿರ ಪ್ರೋತ್ಸಾಹ ಧನ

ಬ್ರಹ್ಮಾವರ: ಭಕ್ತಿ ಭಾವದ ಸಿರಿ ಸಿಂಗಾರ ಕೋಲಾ ಸೇವೆ : ಸುಗ್ಗಿ ಸುಧಾಕರ್ ಶೆಟ್ಟಿ ನಿವಾಸದಲ್ಲಿ ಕೇಮಾರು ಈಶ ವಿಠಲ ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿ

ಸುಣ್ಣಾರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಬೆಸುಗೆ-2026’ ಬೇಸಿಗೆ ಶಿಬಿರಕ್ಕೆ ಚಾಲನೆ: ​ಸೃಜನಾತ್ಮಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಚೆಸ್ ಕ್ರೀಡಾಪಟು ಆರಾಧ್ಯ ಶೆಟ್ಟಿ

ಕೋಡಿ ಕನ್ಯಾನದ ಕಡಲ ತಡಿಯಲ್ಲಿ ಅದ್ದೂರಿ ‘ಜನಪದ ಸಿರಿ’ ಸಂಭ್ರಮ: ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಾವು ವಿಫಲರಾಗಿದ್ದೇವೆ – ಶಂಕರ್ ಕುಂದರ್

ಕುಂದಾಪುರ: ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ 9ನೇ ರ‍್ಯಾಂಕ್ – ಆಡಳಿತ ಮಂಡಳಿಯಿಂದ 50 ಸಾವಿರ ನಗದು ಪುರಸ್ಕಾರ

ಕುಂದಾಪುರ: ದ್ವಿತೀಯ PUC ಫಲಿತಾಂಶದಲ್ಲಿ ಸುಣ್ಣಾರಿ ಎಕ್ಸಲೆಂಟ್ ವಿದ್ಯಾರ್ಥಿಗಳ ಅಮೋಘ ಸಾಧನೆ. ಆಡಳಿತ ಮಂಡಳಿ ಮತ್ತು ಪೋಷಕರ ಸಂಭ್ರಮ.

Leave a Comment