ಸಿದ್ದಾಪುರ: ಜ್ಞಾನ ಸರಸ್ವತಿ ಶಿಕ್ಷಣ ಸಂಸ್ಥೆಗೆ SSLC ಯಲ್ಲಿ 100 ಫಲಿತಾಂಶ. ಸಾಧನೆಗೈದ ವಿದ್ಯಾರ್ಥಿನಿಗೆ 25 ಸಾವಿರ ಪ್ರೋತ್ಸಾಹ ಧನ

ಸಿದ್ದಾಪುರ :ಕುಂದಾಪುರ ತಾಲೂಕಿನ ಸಿದ್ದಾಪುರದ ಸುಮುಖ ಎಜುಕೇಷನಲ್ ಟ್ರಸ್ಟ್ ಇವರ, ಜ್ಞಾನ ಸರಸ್ವತಿ ಆಂಗ್ಲ ಮಾಧ್ಯಮದ SSLC ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿ, ರಾಜ್ಯ ಮಟ್ಟದಲ್ಲಿ 2ರ‍್ಯಾಂಕ್ ಗಳಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಗೆ ಹೊಸ ಇತಿಹಾಸ ಸ್ರಷ್ಟಿಸಿರುತ್ತಾರೆ.

ಈ ಸಾಧನೆಯ ಸಂಭ್ರಮಕ್ಕೆ ಶಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಮಾತಾನಾಡಿ, ಅನುಭವಿ ಶಿಕ್ಷಕರ ಶ್ರಮ ಮತ್ತು ಪೋಷಕರ ನಿರಂತರ ಸಹಕಾರ ಹಾಗೂ ವಿದ್ಯಾರ್ಥಿಗಳ ಆತ್ಮಸ್ಥೈರ್ಯವೇ ಈ ಫಲಿತಾಂಶಕ್ಕೆ ಕಾರಣ ಎಂದರು.
35 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು,ಅವರಲ್ಲಿ 28 ಮಂದಿ ಡಿಸ್ಟಿಂಕ್ಷನ್ ಹಾಗೂ ಉಳಿದ ಏಳು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವುದಕ್ಕೆ,ಜಿಲ್ಲೆಯಲ್ಲಿ ಪ್ರಥಮ ಎನ್ನುವ ಹೆಗ್ಗಳಿಕೆ ಶಿಕ್ಷಣ ಇಲಾಖೆಯಿಂದ ಕೂಡ ಅಭಿನಂದನೆ ಪಡೆದಿರುತ್ತೇವೆ. ಇದು ನಮ್ಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಸಂಸ್ಥೆಗೆ ಗಳಿಸಿ ಕೊಟ್ಟ ಗೌರವ ಎಂದು ಸಂತೋಷ ವ್ಯಕ್ತ ಪಡಿಸಿದರು.

ಶಿವಾನಿ ಶೆಟ್ಟಿ 617 ಅಂಕ ಪಡೆದು ರಾಜ್ಯಕ್ಕೆ 9 ನೇ ರ‍್ಯಾಂಕ್ ಗಳಿಸಿದ್ದಾರೆ. ಆಯಿಷಾ ತನಾಝ್ 616 ಅಂಕ ಗಳಿಸಿ ರಾಜ್ಯಕ್ಕೆ 10 ನೇ ರ‍್ಯಾಂಕ್ ಗಳಿಸಿರುತ್ತಾರೆ.
2001 ರಲ್ಲಿ ದಕ್ಕೇರಬಾಳು ಶ್ರೀನಿವಾಸ ಕಾಮತ್ ಇವರು ವೆಂಕಟರಮಣ ಎಜುಕೇಷನ್ ಟ್ರಸ್ಟ್ ಹೆಸರಲ್ಲಿ ಶಾಲೆ ಸ್ಥಾಪಿಸಿದ್ದರು.
2025 ರ ಏಪ್ರಿಲ್ ನಂತರ ಸುಮುಖ ಎಜುಕೇಷನಲ್ ಟ್ರಸ್ಟ್ ಈ ವಿದ್ಯಾ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಪಡೆದು, ವಿದ್ಯಾರ್ಥಿಗಳ ಅಗತ್ಯತೆಗನುಗುಣುವಾಗಿ ಅಭಿವೃದ್ಧಿ ಪಡಿಸಿ ವಿದ್ಯಾ ಸಂಸ್ಥೆಯನ್ನು ಮೊನ್ನೆಡೆಸುತ್ತಿದೆ ಎಂದು ತಿಳಿಸಿದರು.

ಸಾಧಿಸಿದ ಸಾಕ್ಷಿಯೊಂದಿಗೆ ಸಮಾಜದ ಎದುರಿಗೆ ಬಂದು ನಿಲ್ಲಬೇಕು ಎನ್ನುವ ಛಲ ನಮ್ಮದಾಗಿತ್ತು.ಇದೀಗ ನಮ್ಮ ಛಲಕ್ಕೆ ವಿದ್ಯಾರ್ಥಿಗಳು ಸಾಧಿಸಿ ಸಮಾಜದಲ್ಲಿ ನಮ್ಮ ವಿದ್ಯಾ ಸಂಸ್ಥೆಯ ಹಿರಿಮೆ ಹೆಚ್ಚಿಸಿ ಕೊಟ್ಟಿರುತ್ತಾರೆ ಎಂದರು.
ಪರೀಕ್ಷೆಯ ಅವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಲ್ಲಿಯೇ ಉಳಿಸಿ ಕೊಂಡು ಅವರಿಗೆ ಉತ್ತಮ ಮಾರ್ಗದರ್ಶನ ನೀಡಿರುವುದು ಕೂಡ ಈ ಉತ್ತಮ ಫಲಿತಾಂಶ ಬರಲು ಕಾರಣ. ಇದಕ್ಕೆ ಪೋಷಕರ ಸಹಕಾರ ಅತೀ ಮಹತ್ತರದಾಗಿತ್ತು ಎಂದು ಶ್ಲಾಘೀಸಿದರು.
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳೊಂದಿಗೆ, ಅಂತರಾಷ್ಟ್ರೀಯ ಮಟ್ಟದ ಉದ್ಯೋಗ ಪಡೆಯುವ ದ್ರಷ್ಟಿಯಿಂದ ಜಪಾನ್ ಮತ್ತು ಜರ್ಮನ್ ದೇಶದಲ್ಲಿನ ಭಾಷೆಗಳನ್ನು ಕೂಡ ಕಲಿಸುವ ಯೋಜನೆಯನ್ನು 6 ನೇ ತರಗತಿಯಿಂದ ಆರಂಭಿಸುವ ಬಗ್ಗೆ ಮಾಹಿತಿ ನೀಡಿದರು.
ಬಡವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಅಂಕ ಪಡೆದು ಕೊಂಡ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.

25 ಸಾವಿರ ಪ್ರೋತ್ಸಾಹ ಧನದೊಂದಿಗೆ ಸನ್ಮಾನ ಸ್ವೀಕರಿಸಿದ ರ‍್ಯಾಂಕ್ ವಿಜೇತ ವಿದ್ಯಾರ್ಥಿನಿಯರು ಶಾಲೆಯ ಆಡಳಿತ ಮಂಡಳಿಗೆ ಮತ್ತು ಭೋದಕ ವೃಂದದವರಿಗೆ ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.

ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಅಮರೇಶ್ ಕುಮಾರ್ ಹೆಗ್ಡೆ, ಮುಖ್ಯೋಪಾಧ್ಯಾಯನಿ ಶ್ವೇತ ಗಣೇಶ್, ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now

Read more

ಕೋಟ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ರಘು ಮಧ್ಯಸ್ಥ ಅವಿರೋಧ ಆಯ್ಕೆ

ಸುಜ್ಞಾನ ವಿದ್ಯಾ ಸಂಸ್ಥೆಯಲ್ಲಿ ‘ವಾಲ್ಬೆಲ್ಲ’ ಕುಂದಾಪ್ರ ಕನ್ನಡದ ಸಂಸ್ಕೃತಿ ಸಮಾರಂಭದ ಸಮಾರೋಪ: ಯುವಜನತೆ ದುಶ್ಚಟಗಳಿಂದ ದೂರವಿದ್ದು ಗುರಿಯತ್ತ ಸಾಗಬೇಕು – ಕೆ. ಜಯಪ್ರಕಾಶ್ ಹೆಗ್ಡೆ

ಸುಜ್ಞಾನದಂಗಳದಿ ವಾಲ್ಬೆಲ್ಲದ ಸವಿ ಸಂಭ್ರಮ: ಕುಂದಾಪ್ರ ಕನ್ನಡದ ಅಭಿವೃದ್ಧಿಗೆ ದಿಟ್ಟ ಹೆಜ್ಜೆ: ಕುಂದಾಪ್ರ ಕನ್ನಡದ ಸವಿ ಉಳಿಸಿ ಬೆಳಸುವ ಜವಾಬ್ದಾರಿ ನಮ್ಮದು.ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ

ವಿದ್ಯಾರಣ್ಯ ಶಾಲೆ ಯಡಾಡಿ – ಮತ್ಯಾಡಿಯಲ್ಲಿ ಜುಲೈ 6 ರಂದು ಕುಂದಾಪ್ರ ಕನ್ನಡ ‘ವಾಲ್ಪೆಲ್ಲ’ ಕಾರ್ಯಕ್ರಮ: ಕುಂದಾಪ್ರ ಕನ್ನಡದ ಅಭಿಮಾನ ಬೆಳೆಸಿ ಕೊಳ್ಳ ಬೇಕು – ಕೆ. ಜಯಪ್ರಕಾಶ್ ಹೆಗ್ಡೆ

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹5 ಲಕ್ಷ ಅನುದಾನ ಮಂಜೂರು; ಅಜಿತ್ ಕುಮಾರ್ ಶೆಟ್ಟಿ ಮನವಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಂದನೆ

ಉಡುಪಿ: ಬೈಂದೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮರಳಿ ಆರೋಗ್ಯ ಇಲಾಖೆಗೆ. ತತ್ ಕ್ಷಣ ಜಾರಿಗೆ ಆದೇಶ.

Leave a Comment