ಕುಂದಾಪುರ : ರಾಜ್ಯಮಟ್ಟದಲ್ಲಿ 9 ರ‍್ಯಾಂಕ್ ಪಡೆದು ಕೊಳ್ಳುವ ಮೂಲಕ ನಮ್ಮ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಿರಂತರ ಶೈಕ್ಷಣಿಕ ಮೇಲುಗೈ ಸಾಧಿಸಿದ್ದಾರೆ ಎಂದು,ಎಂ. ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು.
ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಮಾನ್ಯ ಶೆಟ್ಟಿ ಇವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು ಉಡುಪಿ ಜಿಲ್ಲೆಗೆ ಹಾಗೂ ನಮ್ಮ ಎಕ್ಸಲೆಂಟ್ ವಿದ್ಯಾ ಸಂಸ್ಥೆಗೆ, ಇಲ್ಲಿನ ಭೋದಕ ವರ್ಗದವರಿಗೂ ಹಾಗೂ ಪೋಷಕರಿಗೂ ಹೆಮ್ಮೆ ತಂದು ಕೊಟ್ಟಿದ್ದಾರೆ. ಇವರ ಮುಂದಿನ ಉನ್ನತ ಶಿಕ್ಷಣಕ್ಕೆ ನಮ್ಮ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿದೆ.ಮಾನ್ಯ ಶೆಟ್ಟಿ ಇವರ ತಾಯಿ ಸಾಮಾನ್ಯ ಗ್ರಹಿಣಿಯಾಗಿದ್ದು ತಂದೆ ಹೋಟೆಲ್ ನೌಕರರಾಗಿದ್ದರು, ದಿನನಿತ್ಯ ಮನೆಯಿಂದ ಶಾಲೆಗೆ ನಡೆದು ಕೊಂಡು ಬಂದು ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದರು.

ವಿಶೇಷವಾಗಿ ಯಾವುದೇ ಪ್ರತ್ಯೇಕ ತರಬೇತಿ ಇಲ್ಲದೆ ನಮ್ಮ ಸಂಸ್ಥೆಯ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಈ ಸಾಧನೆ ಮಾಡಿದ್ದು ನಮ್ಮ ಶಿಕ್ಷಣ ಸಂಸ್ಥೆಗೆ ದೊಡ್ಡ ಗೌರವ ಎಂದು ಕೊಂಡಾಡಿದರು.
ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಶಿಕ್ಷಣ, ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ಎಕ್ಸಲೆಂಟ್ ಪ್ರಬಲ.ಪ್ರಾಂಶುಪಾಲ ನಾಗರಾಜ್ ಶೆಟ್ಟಿ.
ನಮ್ಮ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮಹೇಶ್ ಹೆಗ್ಡೆ ಕ್ರೀಡಾಪಟುವಾಗಿದ್ದು, ಈ ದಿಸೆಯಲ್ಲಿ 2 ಎಕರೆ ಜಾಗ ಖರೀದಿ ಮಾಡಿ ಅತ್ತ್ಯುತ್ತಮ ದರ್ಜೆಯ ಕ್ರೀಡಾಂಗಣ ಮಾಡುವ ಯೋಜನೆ ಮಾಡಿರುತ್ತಾರೆ ಎಂದು ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹೇಳಿದರು.
JEE : 21 ವಿದ್ಯಾರ್ಥಿಗಳು 90 ರಿಂದ 98 ಪರ್ಸೆಂಟ್ ಗಳಿಸಿರುತ್ತಾರೆ.
CS ಫೌಂಡೇಶನ್ : 24 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. CET & NEET ಪರೀಕ್ಷೆಗಳಲ್ಲೂ ಕೂಡ ಉತ್ತಮ ಸಾಧನೆ ಮಾಡಿ ವಿದ್ಯಾ ಸಂಸ್ಥೆಗೆ ಮತ್ತು ಇಲ್ಲಿನ ಭೋಧಕರಿಗೆ ಗೌರವ ತಂದಿರುತ್ತಾರೆ ಎಂದರು.
ಕರೋನ ನಂತರವೂ ಉತ್ತಮ ಫಲಿತಾಂಶ ನಮ್ಮ ವಿದ್ಯಾ ಸಂಸ್ಥೆಯಿಂದ ಹೊರಹೋಮ್ಮತ್ತಿದೆ.PUC ಫಲಿತಾಂಶದಲ್ಲಿ 2025 ರಲ್ಲಿ ರಾಜ್ಯಕ್ಕೆ ಐದನೇ ಸ್ಥಾನ 2026 ರಲ್ಲಿ ಮುಂದಿನ ವರ್ಷ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಮತ್ತೆ ನಮ್ಮ ವಿದ್ಯಾ ಸಂಸ್ಥೆಗೆ ಹೆಮ್ಮೆ ತರುವ ಜವಾಬ್ದಾರಿಯುತವಾದ ಭೋದನೆ ಮಾಡಲು ನಮ್ಮ ಶಿಕ್ಷಕರು ಪ್ರಯತ್ನಿಸಿಲಿದ್ದಾರೆ ಎಂದರು.
ಎಂ ಎಂ ಹೆಗ್ಡೆ ಚಾರಿಟೇಬಲ್ಮತ್ತು ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಮಹೇಶ್ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಉಪನ್ಯಾಸಕರು, ಮಾನ್ಯ ಶೆಟ್ಟಿ ಮತ್ತು ಮಾನ್ಯ ಶೆಟ್ಟಿ ಪೋಷಕರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.





