ಸಾಲಿಕೇರಿ ಬಸ್ ನಿಲ್ದಾಣದಲ್ಲಿ ನೂತನ ಪ್ರಯಾಣಿಕ ತಂಗುದಾಣ ಲೋಕಾರ್ಪಣೆ: ಸಾರ್ವಜನಿಕ ಸೌಲಭ್ಯಕ್ಕೆ ಕ್ರಷ್ಣ ಪ್ರಸಾದ್ ಕ್ಯಾಶ್ಯೂ ಕೊಡುಗೆ

ಸಾಲಿಕೇರಿ ಬಸ್ ನಿಲ್ದಾಣದಲ್ಲಿ ನೂತನ ಪ್ರಯಾಣಿಕ ತಂಗುದಾಣ ಲೋಕಾರ್ಪಣೆ: ಸಾರ್ವಜನಿಕ ಸೌಲಭ್ಯಕ್ಕೆ ಕ್ರಷ್ಣ ಪ್ರಸಾದ್ ಕ್ಯಾಶ್ಯೂ ಕೊಡುಗೆ


ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಸಾಲಿಕೇರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅಗತ್ಯತೆಗಳನ್ನು ಮನಗಂಡು, ಶ್ರೀ ಕ್ರಷ್ಣ ಪ್ರಸಾದ್ ಕ್ಯಾಶ್ಯೂ ಸಂಸ್ಥೆಯ ವತಿಯಿಂದ ನೂತನ ತಂಗುದಾಣವನ್ನು ನಿರ್ಮಿಸಿ ಸೋಮವಾರ ಲೋಕಾರ್ಪಣೆ ಗೊಳಿಸಲಾಯಿತು.

ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮಾಲೀಕರಾದ ಸಂಪತ್ ಕುಮಾರ್ ಶೆಟ್ಟಿ, “ನಮ್ಮ ಉದ್ಯಮ ಕ್ಷೇತ್ರದಲ್ಲಿ 15 ವರ್ಷಗಳಲ್ಲಿ ಸಾಧಿಸಿದ್ದನ್ನು, ಸಾಲಿಕೇರಿಯ ದೈವಾ ದೇವರ ಅನುಗ್ರಹದಿಂದ ಕೇವಲ ಒಂದು ವರ್ಷದ ಅವಧಿಯಲ್ಲಿ ಸಾಧಿಸಲು ಸಾಧ್ಯವಾಯಿತು. ಈ ಊರು ನಮಗೆ ಬಹಳಷ್ಟು ಕೊಟ್ಟಿದ್ದು, ಆದ್ದರಿಂದ ಊರಿನ ಅಭಿವೃದ್ಧಿ ವಿಚಾರದಲ್ಲಿ ಸದಾ ಜನರೊಂದಿಗೆ ನಿಂತು ಕೆಲಸ ಮಾಡುವ ಬದ್ಧತೆ ನಮ್ಮದು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಮಾತನಾಡಿ, “ಕ್ರಷ್ಣ ಪ್ರಸಾದ್ ಕ್ಯಾಶ್ಯೂ
ಸಂಸ್ಥೆಯು ಸಾವಿರಾರು ಬಡ ವರ್ಗದ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರ ಜೀವನೋಪಾಯಕ್ಕೆ ಭದ್ರತೆ ಒದಗಿಸುತ್ತಿದೆ. ಬಡವರ ಹೊಟ್ಟೆ ತುಂಬಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಈ ಸಂಸ್ಥೆಗೆ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಾ ಪ್ರೋತ್ಸಾಹ ಹಾಗೂ ಸಂಪೂರ್ಣ ಸಹಕಾರ ನೀಡಲಿದೆ” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದೇವಾನಂದ್ ನಾಯಕ್, GM ವಿದ್ಯಾ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್ ಚಂದ್ರ ಶೆಟ್ಟಿ, ಸಾಲಿಕೇರಿ ಶ್ರೀ ವೀರಭದ್ರ ದೇವಸ್ಥಾನದ ಧರ್ಮದರ್ಶಿಗಳಾದ ಸುರೇಶ್ ಶೆಟ್ಟಿಗಾರ್, ನಾಗೇಶ್, ಹರೀಶ್ ಶೆಟ್ಟಿ, ಉಮಾ ಬಾಯಿ ಅಶೋಕ್, ನಿರಂಜನ್ ಶೆಟ್ಟಿ, ನಾಗೇಶ್, ಮಹೇಶ್ ಶೆಟ್ಟಿಗಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶೇಖರ್ ಎಲ್ಲರನ್ನು ಸ್ವಾಗತಿಸಿ, ಅಂತ್ಯದಲ್ಲಿ ಧನ್ಯವಾದಗಳನ್ನು ಸಲ್ಲಿಸಿದರು.

Join WhatsApp

Join Now

Join Telegram

Join Now

Read more

ಕುಂದಾಪುರ: ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿಯಲ್ಲಿ ಗುರುವಂದಾನ ಕಾರ್ಯಕ್ರಮ

ವಿದ್ಯಾರಣ್ಯ ಅಂಗಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಕರಾವಳಿ ಸೊಗಡಿನ ವೇಷ ಭೂಷಣ,ಶಾಸ್ತ್ರ, ಸಂಪ್ರದಾಯಗಳ ವೈಭವದ ಮೆರವಣಿಗೆ

ಕೋಟ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ರಘು ಮಧ್ಯಸ್ಥ ಅವಿರೋಧ ಆಯ್ಕೆ

ಸುಜ್ಞಾನ ವಿದ್ಯಾ ಸಂಸ್ಥೆಯಲ್ಲಿ ‘ವಾಲ್ಬೆಲ್ಲ’ ಕುಂದಾಪ್ರ ಕನ್ನಡದ ಸಂಸ್ಕೃತಿ ಸಮಾರಂಭದ ಸಮಾರೋಪ: ಯುವಜನತೆ ದುಶ್ಚಟಗಳಿಂದ ದೂರವಿದ್ದು ಗುರಿಯತ್ತ ಸಾಗಬೇಕು – ಕೆ. ಜಯಪ್ರಕಾಶ್ ಹೆಗ್ಡೆ

ಸುಜ್ಞಾನದಂಗಳದಿ ವಾಲ್ಬೆಲ್ಲದ ಸವಿ ಸಂಭ್ರಮ: ಕುಂದಾಪ್ರ ಕನ್ನಡದ ಅಭಿವೃದ್ಧಿಗೆ ದಿಟ್ಟ ಹೆಜ್ಜೆ: ಕುಂದಾಪ್ರ ಕನ್ನಡದ ಸವಿ ಉಳಿಸಿ ಬೆಳಸುವ ಜವಾಬ್ದಾರಿ ನಮ್ಮದು.ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ

ವಿದ್ಯಾರಣ್ಯ ಶಾಲೆ ಯಡಾಡಿ – ಮತ್ಯಾಡಿಯಲ್ಲಿ ಜುಲೈ 6 ರಂದು ಕುಂದಾಪ್ರ ಕನ್ನಡ ‘ವಾಲ್ಪೆಲ್ಲ’ ಕಾರ್ಯಕ್ರಮ: ಕುಂದಾಪ್ರ ಕನ್ನಡದ ಅಭಿಮಾನ ಬೆಳೆಸಿ ಕೊಳ್ಳ ಬೇಕು – ಕೆ. ಜಯಪ್ರಕಾಶ್ ಹೆಗ್ಡೆ

Leave a Comment