ಬೈಂದೂರು: “ಬರೀಗಾಲ ಸಂತ ದುಡ್ಡು ಪೂರ್ತಿ ನನಗೆ ಬೇಕು ಅಂತ” ಬೈಂದೂರು ಶಾಸಕರ ಬಗ್ಗೆ ಉಚ್ಚಾಟಿತ ಬೈಂದೂರು ಬಿಜೆಪಿ ನಾಯಕ ದೀಪಕ್ ಕುಮಾರ್ ವ್ಯಂಗ್ಯ
ಬೈಂದೂರು : ಬಿಜೆಪಿ ಪಕ್ಷದ ನಾಯಕತ್ವದ ವಿರುದ್ಧ ಪದೇ ಪದೇ ಅವಮಾನಕರಿಯಾಗಿ ಮಾತಾಡಿ, ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದ ಆರೋಪದಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕರು, ರೈತ ಮುಖಂಡರು ಆದ ದೀಪಕ್ ಕುಮಾರ್ ಶೆಟ್ಟಿ ಇವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್. ಕೆ.ನೋಟೀಸ್ ನೀಡಿದ್ದರು.
ಈ ಬಗ್ಗೆ ಶುಕ್ರವಾರದಂದು ಬೈಂದೂರು ಬಿಜೆಪಿ ಕಚೇರಿಯಲ್ಲಿ, ಉಚ್ಛಾಟಿತ ಬಿಜೆಪಿ ನಾಯಕ ದೀಪಕ್ ಕುಮಾರ್ ಶೆಟ್ಟಿ ಪತ್ರಿಕಾ ಹೇಳಿಕೆ ನೀಡಿದರು.
ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದು, ನಂತರ ಸುಕುಮಾರ್ ಶೆಟ್ಟಿ ಮತ್ತು ಸುಭಾಸ್ ಶೆಟ್ಟಿ ಅವರ ಒತ್ತಾಯದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು,ಕಳೆದ 13 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ, ತಾಲೂಕು ಪಂಚಾಯತ್ ಮತ್ತು CA ಬ್ಯಾಂಕ್ ಸದಸ್ಯರಾಗಿ, TAPMC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ.ಪ್ರಾರಂಭದ ದಿನಗಳಿಂದ ಇಲ್ಲಿಯವರೆಗೆ ಕಾರ್ಯಕರ್ತರಿಗೆ ನೋವು ಆಗದ ರೀತಿಯಲ್ಲಿ 24x 7 ಸೇವೆ ನೀಡಿದ್ದೇನೆ.
ಆದರೆ ವಿಧಾನ ಸಭಾ ಚುನಾವಣೆ ಸಂದರ್ಭ, ವಾಮಮಾರ್ಗದಲ್ಲಿ ಗುರುರಾಜ್ ಗಂಟಿಹೊಳೆ ಟಿಕೆಟ್ ಪಡೆದು ಚುನಾವಣೆ ಸ್ಪರ್ಧೆ ಮಾಡಿದರು.
ಬೈಂದೂರು ವ್ಯಾಪ್ತಿಯಲ್ಲಿ ಪಕ್ಷಕ್ಕಾಗಿ ದುಡಿದ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದರು ಕೂಡ, ಪಕ್ಷದ ಆದೇಶದಂತೆ ಹಗಲಿರುಳು ಗೆಲುವುಗಾಗಿ ಶ್ರಮಿಸಿದ್ದೇವೆ.
ಕಾರ್ಯಕರ್ತರ ಮತ್ತು ನಾಯಕರ ಪರಿಶ್ರಮದಿಂದ ಆಯ್ಕೆ ನಂತರ ಬರೀಗಾಲ ಸಂತ ಅನಿಸಿ ಕೊಂಡವರು ಇದೀಗ ಎಲ್ಲಾ ದುಡ್ಡು ನನಗೆ ಬೇಕು ಎನ್ನುವಂತೆ ನಡೆದು ಕೊಳ್ಳುತ್ತಿದ್ದಾರೆ. ಈ ಬರೀಗಾಲ ಸಂತ ಯಾವತ್ತು ಬೈಂದೂರಿಗೆ ಪಾದರ್ಪಣೆ ಮಾಡಿದ್ರೋ ಅಂದಿನಿಂದ ಇಂದಿನವರೆಗೆ ಬಿಜೆಪಿ ಕಾರ್ಯಕರ್ತರಿಗೆ ಬರಗಾಲ ಬಂದ ಹಾಗಾಗಿದೆ.
ಬೈಂದೂರು ವ್ಯಾಪ್ತಿಯಲ್ಲಿ 7 ಮರಳು ದಕ್ಕೇಯಿದ್ದು ಪ್ರತಿ ಮರಳು ಧಕ್ಕೆಯಿಂದ, ತಲಾ 5 ಲಕ್ಷ ರೂಪಾಯಿಯಂತೆ 35 ಲಕ್ಷ ರೂಪಾಯಿ ಪ್ರತಿ ತಿಂಗಳು ಆಫೀಸ್ ನಿರ್ವಹಣೆಗೆ ಎಂದು ಬೈಂದೂರು ಶಾಸಕರು ವಸೂಲಿ ಮಾಡುತ್ತಿದ್ದಾರೆ. ಯಡ್ತರೆ ಮತ್ತು ರಾಣಿ ಬೆನ್ನೂರು ಹೆದ್ದಾರಿ ನಿರ್ಮಾಣ ಕಂಪನಿಯಿಂದ, ವಾರಾಹಿ ಬಲದಂಡೆ ಯೋಜನೆಯ ಗುತ್ತಿಗೆದಾರಾರಿಂದ ಕೂಡ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭಿರ ಆರೋಪ ಮಾಡಿದರು.
ಎಲ್ಲಾ ಚುನಾವಣೆಯಲ್ಲಿಯೂ ಪ್ರತಿಯೊಬ್ಬರ ಗೆಲುವಿಗೆ ಶ್ರಮಿಸಿದ್ದೇನೆ.,ನನ್ನ ಯವ್ವನವನ್ನು ಪಕ್ಷದ ಸೇವೆಗಾಗಿ ವ್ಯೆಯಿಸಿದ್ದೇನೆ.ಬೈಂದೂರು ಮಂಡಲ ಅಧ್ಯಕ್ಷನಾಗಿ ಉಡುಪಿ ಜಿಲ್ಲೆಯಲ್ಲಿ 19 ಬಾರಿ ಸನ್ಮಾನ ಪುರಸ್ಕಾರ ಪಡೆದಿದ್ದೆ. ಆದರೆ ಇದೀಗ ನನ್ನ ಉಚ್ಚಾಟನೆ ಅಂದರೆ ಇದು ನನ್ನ ರಾಜಕೀಯ ಕೊಲೆ.ನನ್ನ ತಪ್ಪು ಸ್ಪಷ್ಟ ಪಡಿಸಿದಲ್ಲಿ ರಾಜಕೀಯ ನಿವೃತ್ತಿಯಾಗುವುದಾಗಿ ಗುಡುಗಿದರು.
ಯಾವುದೇ ಕಾರಣಕ್ಕೂ ಬೇರೆ ಪಕ್ಷ ಸೇರುವುದಿಲ್ಲ. ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಬಿಜೆಪಿ ಪಕ್ಷದಲ್ಲೆ ಉಳಿದುಕೊಂಡು ಕಾರ್ಯಕರ್ತರ ಜೊತೆಗೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.
ಬೈಂದೂರು ಉತ್ಸವ ಎಂದರೆ 10 ರೂಪಾಯಿ ಕಬ್ಬಿನ ಜ್ಯುಸ್ ಗೆ 20 ರೂಪಾಯಿ ಕೊಟ್ಟು, 50 ರೂಪಾಯಿ ಗೋಬಿ ಮಂಚೂರಿಗೆ ನೂರು ರೂಪಾಯಿ ನೀಡಿ ತಿನ್ನುವುದು ಎಂದು ವ್ಯಂಗ್ಯವಾಡಿದರು.
ನನ್ನ ಉಚ್ಚಾಟನೆಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇರ ಕಾರಣ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪ ಸಂಖ್ಯಾತ ಮೋರ್ಚಾದ ಮಾಜೀ ಅಧ್ಯಕ್ಷ ಲಿಮೋನ್, ಪಂಚಾಯತ್ ಮಾಜೀ ಅಧ್ಯಕ್ಷ ಕ್ರಷ್ಣ ದೇವಾಡಿಗ, ತಾಲೂಕು ಪಂಚಾಯತ್ ಮಾಜೀ ಸುರೇಂದ್ರ ಖಾರ್ವಿ, ಯುವ ಮೋರ್ಚಾದ ಪ್ರದಾನ ಕಾರ್ಯದರ್ಶಿ ಆಕಾಶ್ ಪೂಜಾರಿ, ಪಂಚಾಯತ್ ಸದಸ್ಯ ಭಾಸ್ಕರ್ ಮಾರಾಠಿ ಉಪಸ್ಥಿತರಿದ್ದರು.





