ಬ್ರಹ್ಮಾವರ: ಹೇರಾಡಿ ಹೊಸಳಾದಲ್ಲಿ ಮರಳು ಗಣಿಗಾರಿಕೆ – ಗುತ್ತಿಗೆದಾರರ ಮತ್ತು ನಾಗರೀಕ ನಡುವೆ ಜಟಾಪಟಿ, ಶಾಸಕರ ಹಾಗೂ ಸಂಸದರ ಮೌನ

ಬ್ರಹ್ಮಾವರ: ಹೇರಾಡಿ ಹೊಸಳಾದಲ್ಲಿ ಮರಳು ಗಣಿಗಾರಿಕೆ – ಗುತ್ತಿಗೆದಾರರ ಮತ್ತು ನಾಗರೀಕ ನಡುವೆ ಜಟಾಪಟಿ, ಶಾಸಕರ ಹಾಗೂ ಸಂಸದರ ಮೌನ

ಬ್ರಹ್ಮಾವರ :ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮರಳು ಗಣಿಗಾರಿಕೆ ಎನ್ನುವುದು ಕೋಲಾರದ ಚಿನ್ನದ ಗಣಿಗಾರಿಕೆಯ ಮಟ್ಟದಲ್ಲಿ ಹವಾ ಸ್ರಷ್ಟಿಸಿದೆ.
ಮನುಷ್ಯನ ದುರಾಸೆ ಫಲ ಜುಳ ಜುಳುನೆ ಹರಿಯ ಬೇಕಾಗಿದ್ದ ಸೀತಾನದಿ ಇಂದು ಅಲ್ಲಲ್ಲಿ ಅಡೆತಡೆಯಲ್ಲಿ ಸಿಲುಕಿ ತನ್ನ ನದಿ ಚಲನೆಯ ಪಥ ಬದಲಿಸಿದೆ. ಕೆಲವು ಕಡೆ ನಿಶ್ಚಲ ಸ್ಥಿತಿಯಲ್ಲಿದೆ. ಇದೆಕ್ಕೆಲ್ಲ ,ಕೃಷಿ ಭೂಮಿ ಮತ್ತು ನೀರಿನ ಮಾರ್ಗದ ಆಕ್ರಮಣ ಜೊತೆಗೆ ನದಿಯಲ್ಲಿನ ಆಕ್ರಮ ಮರಳುಗಾರಿಕೆ ಕೂಡ ಕಾರಣವಾಗಿದೆ.

ಇತ್ತೀಚಿನ ವರ್ಷದಲ್ಲಿ ತೆಕ್ಕಟ್ಟೆ,ಕೋಟ ಗಿಳಿಯಾರು, ಚಿತ್ರಪಾಡಿ, ಕಾರ್ಕಡ, ಕಾವಾಡಿ ಗ್ರಾಮದಲ್ಲಿನ ಕೃಷಿ ಭೂಮಿಯು,ಮಳೆಗಾಲದಲ್ಲಿ ಕೃತಕ ನೆರೆಯಿಂದ ಕೃಷಿ ಭೂಮಿ ನಾಶವಾಗುತ್ತಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿ ರೈತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.ತೆಕ್ಕಟ್ಟೆಯಿಂದ ಹೊಸಾಳದವರೆಗಿನ,ಸುಮಾರು 8 ಕಿಲೋಮೀಟರ್ ಹೊಳೆಯ ಹೂಳು ಮತ್ತು ಮರಳು ದಿಬ್ಬ ತೆಗೆಯುವಂತೆ ಮನವಿಯಲ್ಲಿ ಬೇಡಿಕೆ ಇಟ್ಟಿದ್ದರು.

ಹೇರಾಡಿಯ ಹೊಸಾಳದ ನಾಗರಮಠ ಎನ್ನುವಲ್ಲಿನ ಸೀತಾ ನದಿಯಲ್ಲಿನ ಹೂಳು ತೆರವು ಗೊಳಿಸಲು ಉಡುಪಿ ಜಿಲ್ಲಾಡಳಿತ
ನಿರ್ಧರಿಸಿ,ಗಣಿಇಲಾಖೆಯ ಮೂಲಕ ಟೆಂಡರ್ ಕರೆದಿತ್ತು. ಸರಿಸುಮಾರು 9 ಎಕರೆಯ ಮರಳು ದಿಬ್ಬ ತೆರವು ಮಾಡಿ, 62 ಸಾವಿರ ಮೆಟ್ರಿಕ್ ಟನ್ ಮರಳು ತೆಗೆಯುಲು ಕುಶ ಎನ್ನುವವರು 5 ವರ್ಷದ ಅವಧಿಗೆ ಮರಳು ಗಣಿಗಾರಿಕೆಗೆ ಪರವಾನಿಗೆ ಪಡೆದಿದ್ದರು.
ಸ್ಥಳೀಯರ ಪ್ರಕಾರ ಇಲ್ಲಿ ಸಂಪ್ರದಾಯಿಕ ಮರಳು ಗಣಿಗಾರಿಕೆ ನಡೆಯುತ್ತಿಲ್ಲ.
ಬದಲಾಗಿ ಅವೈಜ್ಞಾನಿಕವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ನಿಗದಿತ ಮೆಟ್ರಿಕ್ ಟನ್ ಬದಲಾಗಿ ಒಂದು ಲಕ್ಷದ 13 ಸಾವಿರ ಮೆಟ್ರಿಕ್ ಟನ್ ಮರಳು ತೆಗೆಯಲು ಪ್ರಯತ್ನ ಮಾಡುತ್ತಿದ್ದಾರೆ.ಇದರಿಂದ ಅಕ್ಕಾಪಕ್ಕದಲ್ಲಿ ಇರೋ ಮನೆ ಮತ್ತು ಕೃಷಿ ಭೂಮಿ ಮಳೆಗಾಲದಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಲಿದೆ. ಇಲ್ಲಿನ ಅಗಲ ಕಿರಿದಾದ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನ ಓಡಾಡಿದಲ್ಲಿ ಶಾಲೆಗೆ ಹೋಗುವ ಸಣ್ಣ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಅಪಾಯವಾಗಲಿದೆ. ಅಲ್ಲದೇ ಉಪ್ಪು ನೀರು ಕೂಡ ಸೇರಿದಲ್ಲಿ ಕುಡಿಯುವ ಬಾವಿ ನೀರು ಕೂಡ ಉಪ್ಪು ಮಿಶ್ರಣವಾಗಲಿದೆ ಎನ್ನುವುದು ಸ್ಥಳೀಯರ ಆತಂಕ.

ಈ ಬಗ್ಗೆ ಈಗಾಗಲೇ ಸ್ಥಳೀಯರು ನ್ಯಾಯಾಲಯದ ಕಟಕಟ್ಟೆಗೂ ಪ್ರಕರಣದ ಬಗ್ಗೆ ದೂರು ದಾಖಲಿಸಿರುವುದಾಗಿ ತಿಳಿಸಿರುತ್ತಾರೆ.
ಮಂಗಳವಾರದಂದು ಮರಳು ಸಾಗಟ ಮಾಡಲು ಬಂದ ಲಾರಿ ಹೋರಾಟಗಾರರೋಬ್ಬರಿಗೆ ತಗುಲಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ.ಆಸ್ಪತ್ರೆಗೆ ದಾಖಲಾದರೂ ಕೂಡ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಅನ್ನೋದು ಹೋರಾಟಗಾರರ ಆರೋಪ. ಆದರೆ ಈ ಎಲ್ಲಾ ಆತಂಕ ಮತ್ತು ಆರೋಪಗಳಿಗೆ ಸ್ಪಂದಿಸಿ, ಸಮಸ್ಯೆ ಬಗೆ ಹರಿಸಬೇಕಾದವರು ಜನಪ್ರತಿನಿಧಿಗಳು.ಸ್ಥಳೀಯರು ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಕೇಳಿಕೊಂಡಾಗ ನೀವು ಹೋರಾಟ ಮಾಡಿ. ನಾವು ನಿಮ್ಮೊಂದಿಗೆ ಇದ್ದೇವೆ ಎನ್ನುವ ಆಶ್ವಾಸನೆ ನೀಡಿದ್ದಾರೆ ಎಂದು ಹೋರಾಟಗಾರರ ತಿಳಿಸಿರುತ್ತಾರೆ.

ಇನ್ನೊಂದು ಕಡೆ ಮರಳು ಗಣಿಗಾರರಿಗೂ ನೀವು ಕಾನೂನು ವ್ಯಾಪ್ತಿಯಲ್ಲಿ ನಿಮ್ಮ ಗಣಿಗಾರಿಕೆ ಮಾಡಿ ಎಂದು ಅಭಯ ನೀಡಿದ್ದಾರಂತೆ.
ಇದೀಗ ಹೇರಾಡಿ ಹೊಸಾಳದ ದಕ್ಕೆಯಲ್ಲಿ ಮೀಸಲು ಪಡೆ ಪೊಲೀಸ್ ಸಿಬ್ಬಂದಿಯವರು ಮರಳುಗಣಿಗಾರಿಕೆ ಮಾಡುವವರಿಗೆ ಭದ್ರತೆ ನೀಡುತ್ತಿದ್ದಾರೆ.

ಮರಳು ಹಲಾವಾರು ಕಾಮಗಾರಿಗೆ ಅಗತ್ಯವಿದೆ.
ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದೆ. ಮರಳು ಗಣಿಗಾರಿಕೆ ನಿಲ್ಲಬಾರದು. ಆದರೆ ಅದು ಅಲ್ಲಿನ ಸ್ಥಳೀಯ ಜನರ ನೆಮ್ಮದಿಗೆ ಭಂಗ ತರುವ ಮಟ್ಟದಲ್ಲಿ ನಡೆಯ ಕೂಡದು. ಸ್ಥಳೀಯರ ನ್ಯಾಯುತವಾದ ಬೇಡಿಕೆಗೆ ಒತ್ತು ನೀಡಿ, ಅವರ ಆತಂಕ ದೂರ ಮಾಡಬೇಕಾದದ್ದು ಜನಪ್ರತಿನಿದಿನಗಳ ಮತ್ತು ಅಧಿಕಾರಿಗಳ ಜವಾಬ್ದಾರಿ. ಇದನ್ನು ಅರಿತು ಆದಷ್ಟು ಬೇಗ ಸ್ಥಳೀಯ ಮತ್ತು ಮರಳು ಗುತ್ತಿಗೆದಾರರ ಸಭೆ ನಡೆಸಿ ಸಮಸ್ಯೆ ಇತ್ಯಾರ್ತಗೊಳಿಸಬೇಕು ಎನ್ನುವುದು ಸ್ಥಳೀಯರ ಹೇಳಿಕೆ.

Join WhatsApp

Join Now

Join Telegram

Join Now

Read more

ಕುಂದಾಪುರ: ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ 9ನೇ ರ‍್ಯಾಂಕ್ – ಆಡಳಿತ ಮಂಡಳಿಯಿಂದ 50 ಸಾವಿರ ನಗದು ಪುರಸ್ಕಾರ

ಕುಂದಾಪುರ: ದ್ವಿತೀಯ PUC ಫಲಿತಾಂಶದಲ್ಲಿ ಸುಣ್ಣಾರಿ ಎಕ್ಸಲೆಂಟ್ ವಿದ್ಯಾರ್ಥಿಗಳ ಅಮೋಘ ಸಾಧನೆ. ಆಡಳಿತ ಮಂಡಳಿ ಮತ್ತು ಪೋಷಕರ ಸಂಭ್ರಮ.

ಎಕ್ಸಲೆಂಟ್ ಕಾಲೇಜು, ಸುಣ್ಣಾರಿ, ಕುಂದಾಪುರ: “ರಾಜ್ಯದಲ್ಲಿ ಅತ್ಯುತ್ತಮ ಸಾಧನೆ”

ಕುಂದಾಪುರ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಡೋಣ ಬಾ ಬೇಸಿಗೆ ಶಿಬಿರಕ್ಕೆ ಚಾಲನೆ.ಕ್ರೀಡಾಸಾಧಕರಿಗೆ ಸರಕಾರಿ ಉದ್ಯೋಗ ಅವಕಾಶ – ಕ್ರೀಡಾಪಟು ಪೊಲೀಸ್ ಅಧಿಕಾರಿ ನವೀನ್ ಕಾಂಚನ್

ಬ್ರಹ್ಮಾವರ : ಸುಜ್ಞಾನ ವಿದ್ಯಾ ಸಂಸ್ಥೆ ವಿದ್ಯಾರ್ಥಿವೇತನ ಪರೀಕ್ಷೆ ಉದ್ಘಾಟನೆ : ಅಂಕಗಳಿಕೆ ಜೊತೆಗೆ ಸಾಮಾಜಿಕ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಿ. ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆ

ಬ್ರಹ್ಮಾವರ ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್ ಹೌಸ್ ಲೋಕಾರ್ಪಣೆ: ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು – ಉದ್ಯಮಿ ಆನಂದ್ ಸಿ ಕುಂದರ್

Leave a Comment