
ಸಾಲಿಗ್ರಾಮ: ಅಕ್ಟೊಬರ್ 2 ರಂದು ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಹಿರಿಯ ಕಾಂಗ್ರೆಸ್ ಪಕ್ಷದ ಮಾರ್ಗದರ್ಶಕರಾದ ಮೋಹನ್ ಗಿಳಿಯಾರ್ ಮತ್ತು ಬಸವ ಪೂಜಾರಿಯವರು ಗುಂಡ್ಮಿ ಇವರು ಗಾಂಧೀಜಿಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತಿಮ್ಮಾ ಪೂಜಾರಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿ ಯಾವತ್ತೂ ಹಿಂಸೆಗೆ ಪ್ರಚೋದನೆ ನೀಡಿದವರಲ್ಲ. ಸುಳ್ಳು ಹೇಳಿ ಜನರ ಭಾವನೆ ಕೆಣಕಿದವರು ಅಲ್ಲ.
ಗಾಂಧೀಜಿಯವರ ಪ್ರಬಲವಾದ ಅಸ್ತ್ರ ಎಂದರೆ ಸತ್ಯ ಮತ್ತು ಅಹಿಂಸೆಯಾಗಿತ್ತು. ಆ ಕಾರಣದಿಂದಲೇ ವಿಶ್ವ ಇಂದು ಕೂಡ ಒಬ್ಬ ಶ್ರೇಷ್ಠ ಮನತಾವಾದಿ ಎಂದು ಸ್ಮರಿಸಿ ಕೊಂಡಾಡುತ್ತಿದೆ ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಮಧ್ಯಮ ಮತ್ತು ಪತ್ರಿಕೆಯ ಬಳಕೆ ಕಡಿಮೆ ಇದ್ದಂತ ಸಮಯದಲ್ಲೂ ಕೂಡ ಅವರು ದೇಶದ ಜನರನ್ನು ಒಂದುಗೂಡಿಸಿದ್ದು ಮಾತ್ರ ಒಂದು ಅದ್ಭುತ ಎಂದರು. ಇಂದು ಭಾವನೆಗಳ ಮೇಲೆ ರಾಜಕೀಯ ಮಾಡಿ ಅಧಿಕಾರ ಹಿಡಿಯುವ ಕೆಟ್ಟ ಸಂಪ್ರದಾಯ ದೇಶದಲ್ಲಿ ನಡೆಯುತ್ತಿದೆ. ಇದಕ್ಕೆ ಜನರು ಮತ್ತೆ ಯುವ ಸಮುದಾಯದ ಕಿವಿಗೋಡದೆ ನ್ಯಾಯ ಮಾರ್ಗದಲ್ಲಿ ಹೋರಾಟ ಮಾಡುವಂತೆ ಕರೆ ನೀಡಿದರು.
ಪ್ರಚಾರ ಸಮಿತಿಯ ಅಧ್ಯಕ್ಷರಾದ ಗೋಪಾಲ ಬಂಗೇರ ಮಾತಾನಾಡಿ, ಆಗರ್ಭ ಶ್ರೀಮಂತಿಕೆಯಲ್ಲಿ ಹುಟ್ಟಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿಯೂ ಕೂಡ, ಭಾರತದಲ್ಲಿನ ಜನರ ಸುಖ ಕಷ್ಟ ಅರಿತು ಜೀವನದುದ್ದಕ್ಕೂ ತುಂಡು ಉಡುಗೆ ತೊಟ್ಟು ಸಾಮಾನ್ಯನಂತೆ ಬಾಳಿ ತೋರಿಸಿ, ವಿಶ್ವದೇಲ್ಲೆಡೆ ಮಹಾತ್ಮಾ ಎಂದು ಹೇಳಿಸಿ ಕೊಂಡವರು ಗಾಂಧೀಜಿಯವರು.
ಗಾಂಧೀಜಿ ನಿಧನರಾದಾಗ ವಿಶ್ವ ಸಂಸ್ಥೆಯಲ್ಲಿನ ಸರ್ವ ದೇಶದ ರಾಷ್ಟ್ರ ದ್ವಜವನ್ನು ಅರ್ಧಕ್ಕೆ ಇಳಿಸಲಾಯಿತು. ಇದು ಮೊಟ್ಟ ಮೊದಲ ಬಾರಿಗೆ ವಿಶ್ವವೇ ಗಾಂಧೀಜಿಗೆ ಸಲ್ಲಿಸಿದ ಗೌರವ ಸಂಸ್ಮರಣೆಯಾಗಿತ್ತು. ಇಂತಹ ಅಪ್ರತಿಮ ವ್ಯಕ್ತಿಯನ್ನು ಕೊಂದ ವ್ಯಕ್ತಿಯನ್ನು ಕೊಂಡಾಡುವ ಕೀಳು ಮಟ್ಟದ ರಾಜಕೀಯ ದೇಶದಲ್ಲಿ ನಡೆಯುವತ್ತಿರುವುದು ದುರದೃಷ್ಟದ ಸಂಗತಿ ಎಂದರು.
ಎಲ್ಲರೂ ಕೂಡ ಎದ್ದು ನಿಂತು ಲಯ ಬದ್ದವಾಗಿ ರಾಷ್ಟ್ರ ಗೀತೆ ಹಾಡಿದ್ದು ವಿಶೇಷವಾಗಿತ್ತು.
ಕೋಟ CA ಬ್ಯಾಂಕ್ ನಿರ್ದೇಶಕರಾದ ಚಂದ್ರ ಪೂಜಾರಿ,CA ಬ್ಯಾಂಕ್ ಉಪಾಧ್ಯಕ್ಷರಾದ ರವಿಕಾಮತ್, ಮಾಜೀ ಸ್ಥಾನಿಯ ಸಮಿತಿ ಅಧ್ಯಕ್ಷ ಅಚ್ಚುತ್ ಪೂಜಾರಿ, ಪಟ್ಟಣ ಪಂಚಾಯತ್ ಮಾಜೀ ಸದಸ್ಯ ಮಹಾಬಲ ಮಾಡಿವಾಳ, ಉಪಸ್ಥಿತರಿದ್ದರು.
ಅಚ್ಚುತ್ ಪೂಜಾರಿ ಸ್ವಾಗತಿಸಿ,ಕೋಟ ಪಂಚಾಯತ್ ಮಾಜೀ ಸದಸ್ಯ ಚಂದ್ರ ಆಚಾರ್ ಧನ್ಯವಾದ ಸಲ್ಲಿಸಿದರು ಕೋಟ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಮೆಂಡನ್ ಕಾರ್ಯಕ್ರಮ ನಿರ್ವಹಿಸಿದರು.





