ಸಾಲಿಗ್ರಾಮ: ದುಡಿಯುವುದಕ್ಕೆ ನೀಡುವ ಶ್ರದ್ದೆ ಉಳಿತಾಯಕ್ಕೂ ನೀಡಿ – ಆರ್ಥಿಕ ಅರಿವು ಶಿಬಿರದಲ್ಲಿ ಲೀಡ್ ಬ್ಯಾಂಕ್ ಪ್ರತಿ ನಿಧಿ ಆಶಾಲತಾ ಸಲಹೆ

ಸಾಲಿಗ್ರಾಮ: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘದ ಸಾಲಿಗ್ರಾಮ ಶಾಖೆ ಮತ್ತು ನಬಾರ್ಡ್ ನ ಸಹಯೋಗದಲ್ಲಿ, ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ಸಾಲಿಗ್ರಾಮದ SCDCC ಶಾಖಾ ಕಚೇರಿಯಲ್ಲಿ ಜರುಗಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಲೀಡ್ ಬ್ಯಾಂಕ್ ಪ್ರತಿನಿಧಿ ಆಶಾಲತಾ ಮಾತನಾಡಿ, ಸಾಲ ಪಡೆದು ಸಣ್ಣ ವ್ಯವಹಾರ ಮಾಡುವುದು ಒಳ್ಳೆಯ ಬೆಳವಣಿಗೆ. ಹಾಗೆಯೇ ತೆಗೆದುಕೊಂಡ ಮೊತ್ತವನ್ನು ಕೂಡ ನಿಗದಿತ ವ್ಯವಹಾರಕ್ಕೆ ಉಪಯೋಗಿಸ ಬೇಕು. ಅನ್ಯ ಕೆಲಸಕ್ಕೆ ಈ ಸಾಲದ ಹಣ ಬಳಕೆ ಮಾಡಿದಾಗ ಉದ್ದೇಶಿತ ವ್ಯವಹಾರ ಸ್ಥಗಿತಗೊಳ್ಳಬಹುದು.
ಅಲ್ಲದೇ ದುಡಿದ ಮೊತ್ತದಲ್ಲಿ ಮುಂದಿನ ಜೀವನದ, ಅಗತ್ಯಕ್ಕೆ ಅನುಗುಣವಾಗಿ ಸ್ವಲ್ಪ ಹಣವನ್ನು ಕೂಡಿಡುವುದು ಉತ್ತಮ ಎಂದರು.ಇನ್ನೊರ್ವ ಮುಖ್ಯ ಅತಿಥಿ ಕರುಣಾಕರ ಮಾತನಾಡಿ, ಕೇಂದ್ರ ಸರಕಾರದಿಂದ ಗ್ರಾಹಕರಿಗೆ ಸಿಗುವ ಸಾಮಾಜಿಕ ಭದ್ರತಾ ಯೋಜನೆಗಳಾದ APY, PMJJBY, PMSBY, PMFBY ಇವುಗಳ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಗ್ರಾಹಕರು ಈ ಯೋಜನೆಯ ಸೌಲಭ್ಯ ಪಡೆಯದೇ ಇದ್ದಲ್ಲಿ ಕೂಡಲೇ ಯೋಜನೆಯಲ್ಲಿ ನೋಂದಣಿ ಮಾಡುವಂತೆ ಸಲಹೆ ನೀಡಿದರು.

ಸಭಾಧ್ಯಕ್ಷತೆಯನ್ನು SCDCC ಬ್ಯಾಂಕ್ ಸಾಲಿಗ್ರಾಮ ಶಾಖೆಯ ಪ್ರಭಂದಕರಾದ ಸಿಪ್ರಿಯನ್ ಲೂಹಿಸ್ ವಹಿಸಿದ್ದು,ಮುಖ್ಯ ಅತಿಥಿಯಾಗಿ SCDCC ಬ್ಯಾಂಕ್ ಇದರ ನಿವೃತ್ತ ಸಿಬ್ಬಂದಿ ಕರುಣಾಕರ ದಾಸ್ ಭಾಗವಹಿಸಿದರು.

ಕಾರ್ಯಕ್ರಮವನ್ನು ಶ್ರೀಮತಿ ಅನ್ನಪೂರ್ಣ ನಿರೂಪಿಸಿದರು.
ಬ್ಯಾಂಕ್ ಸಿಬ್ಬಂದಿಗಳಾದ ಶ್ರೀಮತಿ ಸುರೇಖಾ ಶೆಟ್ಟಿ, ಅಶ್ವಥ್, ಶ್ರೀಮತಿ ಗೀತಾ, ಚೇತನ್, ಲೋಹಿತ್ ಮತ್ತು ನವೋದಯ ಸಂಘದ ಪ್ರೇರಕಿ ಶ್ರೀಮತಿ ಭವಾನಿ, ಶ್ರೀಮತಿ ಬೇಬಿ, ಶ್ರೀಮತಿ ಸುಶೀಲ ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now

Read more

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿಯಲ್ಲಿ ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಉದ್ಯಾವರ: ಭಾರತೀಯ ಸಂಸ್ಕೃತಿಯಲ್ಲಿ ಪೀಠೋಪಕರಣಗಳಿಗೆ ವಿಶೇಷ ಮಹತ್ವ – ಉತ್ತಮ ಅರೋಗ್ಯಕ್ಕೂ ಸಮರ್ಪಕ ಪೀಠದ ಅಗತ್ಯವಿದೆ. ಶ್ರೀ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ

ಗಾಂಧೀಜಿಯವರ ಪ್ರಬಲ ಅಸ್ತ್ರ ಸತ್ಯ ಮತ್ತು ಅಹಿಂಸೆ: ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮಾ ಪೂಜಾರಿ

ಮಣಿಪಾಲ: ಗ್ರಾಹಕರಲ್ಲಿ ಆರ್ಥಿಕ ಜಾಗ್ರತೆ ಮುಖ್ಯ. ಶಾಖಾ ಪ್ರಭಂದಕ ಸದಾಶಿವ ಕೊಠಾರಿ

ಕುಂದಾಪುರ: ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿಯಲ್ಲಿ ಗುರುವಂದಾನ ಕಾರ್ಯಕ್ರಮ

ವಿದ್ಯಾರಣ್ಯ ಅಂಗಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಕರಾವಳಿ ಸೊಗಡಿನ ವೇಷ ಭೂಷಣ,ಶಾಸ್ತ್ರ, ಸಂಪ್ರದಾಯಗಳ ವೈಭವದ ಮೆರವಣಿಗೆ

Leave a Comment