ಉಡುಪಿ: ಬೈಂದೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮರಳಿ ಆರೋಗ್ಯ ಇಲಾಖೆಗೆ. ತತ್ ಕ್ಷಣ ಜಾರಿಗೆ ಆದೇಶ.

ಸಾಲಿಗ್ರಾಮ /ಬೈಂದೂರು :ಸರಾಸರಿ 35 ಕಿಲೋಮೀಟರ್ ಅಂತರದಲ್ಲಿರುವ ಬೈಂದೂರು ಪಟ್ಟಣ ಪಂಚಾಯತ್ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಗೆ ಓರ್ವನೇ ಮುಖ್ಯಾಧಿಕಾರಿ. ಹೆಸರು ಅಜಯ್ ಭಂಡಾರ್ಕರ್. ಕರೋನಾ ಸಂದರ್ಭ ಕುಂದಾಪುರ ಅರೋಗ್ಯ ಇಲಾಖೆಯಲ್ಲಿ ಸೇವೆ ಮಾಡಿದ್ದ ಸಂದರ್ಭದಲ್ಲಿ ಪುಡಾರಿಗಳ ಕಣ್ಣಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿ ಕೊಂಡಿದ್ದ. ಅರೋಗ್ಯ ಇಲಾಖೆಯ ನೌಕರನಾದರೂ ಕೂಡ ನಿಯಾಮಾವಳಿಗಳನ್ನು ಉಲ್ಲಂಘಸಿ ಪೌರಡಳಿತ ಇಲಾಖೆಯ ಉನ್ನತ ಹುದ್ದೆಗೆ,ಆತನನ್ನು ಸರ್ವ ಪಕ್ಷದ ನಾಯಕರ ಹಿತದ್ರಷ್ಟಿಯಿಂದ ಬೈಂದೂರು ಪಟ್ಟಣ ಪಂಚಾಯತ್ ಕಚೇರಿಗೆ ನೂತನ ಮುಖ್ಯಾಧಿಕಾರಿಯಾಗಿ ನೇಮಕಾತಿ ಮಾಡಿ ಪ್ರತಿಷ್ಟಾಪನೆ ಮಾಡಲಾಯಿತು.

2024 ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವ ನಾಯ್ಕ್ ನಿವೃತ್ತಿ ನಂತರ ಬೈಂದೂರು ಮುಖ್ಯಾಧಿಕಾರಿಯಾದ ಅಜಯ್ ಭಂಡಾರ್ಕರ್ ಇವರಿಗೆ ಇಲ್ಲಿನ ಚಾರ್ಜ್ ಆದೇಶ ನೀಡಲಾಯಿತು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧಿಕಾರ ವಹಿಸಿ ಕೊಂಡ ಕೂಡಲೇ ಮಧ್ಯವರ್ತಿಗಳಿಗೆ ಪ್ರವೇಶವಿಲ್ಲ ಎನ್ನುವ ಬೋರ್ಡ್ ಕಚೇರಿಯ ಎಲ್ಲೆಡೆ ಆಳವಡಿಸಲಾಗಿತ್ತು. ಇದನ್ನು ಕಂಡು ಜನ ಸಾಮಾನ್ಯರ ಸಂಭ್ರಮ ಮುಗಿಲು ಮುಟ್ಟಿತ್ತು.ಆದರೇ ನಂತರದ ದಿನದಲ್ಲಿ ಎಲ್ಲವೂ ಕೂಡ ತನ್ನ ಕಪಿಮುಷ್ಟಿಯಲ್ಲಿ ಅಧಿಕಾರ ನಡೆಸಲು ಮಾರ್ಗ ಸೂಚಿ ರಚನೆ ಮಾಡಿಕೊಂಡು ಬಿಟ್ಟರು.

ಇದೀಗ ಸಾಲಿಗ್ರಾಮ ಪಟ್ಟಣ ಪಂಚಾಯತನಲ್ಲಿ,ಹೆಚ್ಚಿನ ಗುತ್ತಿಗೆದಾರರು ಬೈಂದೂರು ಭಾಗದವರೇ ಆಗಿರುವುದು ರಹಸ್ಯವೇನಲ್ಲ. ಮುಖ್ಯಧಿಕಾರಿಗಳೇ ಗುತ್ತಿಗೆದಾರರು ಎನ್ನುವ ಸಂಶಯ ಸಾರ್ವಜನಿಕರದ್ದು.ಇಲ್ಲಿಗೆ ಬಂದ ಕೂಡಲೇ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸರ್ವ ಪಕ್ಷದ ರಾಜಕೀಯದಲ್ಲಿ ವ್ಯವಸಾಯ ಮಾಡಿ ಕೊಂಡಿದ್ದ ಹಲವಾರು ವ್ಯಕ್ತಿಗಳು ಇವರ ವ್ಯವಹಾರಕ್ಕೆ ಶಕ್ತಿಯಾಗಿ ನಿಂತು ಬಿಟ್ಟರು. ಇವರೆಲ್ಲರ ರಾಜಕೀಯದ ಆಟಕ್ಕಿಂತಲೂ ಮಿಗಿಲಾಗಿ ಇವರ ಅಧಿಕಾರದ ಮರ್ಜಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಜನರನ್ನು ದಂಗು ಬೀಳಿಸಿ ಬಿಟ್ಟಿದ್ದರು ಅಜಯ್ ಭಂಡಾರ್ಕರ್.

ಇಲ್ಲಿನ ಬಹುಮಹಡಿ ಕಟ್ಟಡದ ವಿಷಯವಿರಬಹುದು, ಘನ ತ್ಯಾಜ್ಯನಿರ್ವಾಣ ಘಟಕದ ಸಮಸ್ಯೆವಿರಬಹುದು, ಇದೆಲ್ಲವನ್ನು ಕಾನೂನು ಕಾಯ್ದೆ ಎಂದು ಜನರ ವಿರೋಧ ಲೆಕ್ಕಿಸದೆ ನಿಭಾಯಿಸಿದ ಕೀರ್ತಿ ಕಲಶ ಇವರದಾಗಿತ್ತು.ಇನ್ನೊಂದು ಸುವರ್ಣವಕಾಶ :ಪಟ್ಟಣ ಪಂಚಾಯತ್ ಜನ ಪ್ರತಿನಿಧಿಗಳ ಆಡಳಿತ ಮಂಡಳಿಯ ಕೊನೆಯ ದಿನಗಳಲ್ಲಿ ಇನ್ನೊಂದು ಸಂಭ್ರಮದ ವಿಷಯ ನಡೆದು ಬಿಟ್ಟಿತು. ಸಾಲಿಗ್ರಾಮ ಪುರಸಭೆ ಬದಲಾವಣೆ ಆಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಗಿ 50 ನೇ ವರ್ಷ ಪ್ರಾರಂಭವಾಗಿತ್ತು. ಆದರೆ ನವೆಂಬರ್ 3 ಕ್ಕೆ ಪಟ್ಟಣ ಪಂಚಾಯತ್ ಚುನಾಯಿತ ಜನ ಪ್ರತಿನಿಧಿಗಳ ಅವಧಿ ಕೊನೆಗೊಳ್ಳುವ ಹಂತದಲ್ಲಿತ್ತು. ಆದರೆ ಇದೇ ಅವಧಿಯಲ್ಲಿ ಸುವರ್ಣ ಸಂಭ್ರಮ ಮಾಡುವ ಹಠಕ್ಕೆ ಬಿದ್ದು, ಅದಕ್ಕೊಂದಷ್ಟು ಮಂದಿಯನ್ನು ಸೇರಿಸಿ ಹಲವಾರು ಸಮಿತಿ ರಚನೆ ಮಾಡಲಾಯಿತು.

ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ್ ಕಾರಂತ್,ಯಕ್ಷಗಾನ ದಂತ ಕಥೆ ಕಾಳಿಂಗ ನಾವುಡ,ಪಟ್ಟಣ ಪಂಚಾಯತ್ ಕಟ್ಟಡ ಸ್ಥಳದಾನಿ ಜನಾರ್ಧನ ಮಧ್ಯಸ್ಥರ ಪುಥಳಿ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಇದರ ಬಾಬ್ತು ಪ್ರತೇಕ ಪ್ರತೇಕ ಮೂರು ಕಡೆ ಲಕ್ಷ ರೂಪಾಯಿಯಂತೆ ಸಂಗ್ರಹಣೆ ಮಾಡಲಾಯಿತು. ಆದರೆ ಸಾರ್ವಜನಿಕವಾಗಿ ಪುಥಳಿಗಳನ್ನು ಆಳವಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವ ಬಗ್ಗೆ ಮುಖ್ಯಧಿಕಾರಿ ಸಹಿತ ಯಾರಿಗೂ ಅರಿವು ಇಲ್ಲವಾಗಿತ್ತು. ಆದ್ದರಿಂದ ಜಿಲ್ಲಾಡಳಿತ ಪುಥಳಿ ಉದ್ಘಾಟನೆ ಮಾಡಲು ಪರವಾನಿಗೆ ನಿರಾಕರಿಸಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಕೂಡ ಗೈರು ಆಗಿದ್ದರು.ಲಕ್ಷ ಲಕ್ಷ ಮೊತ್ತ ಕ್ರೂಢಿ ಕರಿಸಿ ಮಾಡಿದ ಪುಥಳಿ ಮಾತ್ರ ಶಿಲೆಯೂ ಅಲ್ಲ ಲೋಹವು ಆಗಿರದೇ, ಮಕ್ಕಳ ಆಟಿಕೆಯ ಪೈಬರ್ ಪುಥಳಿಯಾಗಿತ್ತು.

ಆ ಪೈಬರ್ ಪುಥಳಿ ಇಂದು ಪಟ್ಟಣ ಪಂಚಾಯತ್ ಕಟ್ಟಡದ ಮುಲೆಯಲ್ಲಿ ಬೆವರು ಸುರಿಸುತ್ತಿದೆ. ಅದ್ದೂರಿಯಾಗಿ ಸುವರ್ಣ ಸಂಭ್ರಮದ ಕಾರ್ಯಕ್ರಮಕ್ಕೆ ತಯಾರಿಗಾಗಿ ಭರ್ಜರಿ ಹಣ ಸಂಗ್ರಹಣೆ ಮಾಡಲಾಯಿತು. ಪೌರಾಡಳಿತ ಸಚಿವರನ್ನು ಕಾರ್ಯಕ್ರಮಕ್ಕೆ ಅಹ್ವಾನ ನೀಡಲು ಐದು ಜನ ವಿಮಾನದಲ್ಲಿ ಹೋಗಿ ಬರುವ ಮೂಲಕ ದುಂದು ವೆಚ್ಚ ಮಾಡಲಾಯಿತು. ಅಂತೂ ಅಂದು ಮೆರವಣಿಗೆ ಮೂಲಕ ದೇವಸ್ಥಾನದಲ್ಲಿರುವ ಸಭಾಂಗಣಕ್ಕೆ ಸಾಗಿ ಬಂತು.ಒಂದಷ್ಟು ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ಕೆಲವೇ ಕೆಲವು ಪಟ್ಟಣ ಪಂಚಾಯತ್ ಸದಸ್ಯರು…ಉಳಿದವರು ಭಜನೆ ಮಾಡುವ ತಂಡದ ಸದಸ್ಯರು ಮತ್ತು ದೂರದ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು.ಮತ್ತೆ ಸನ್ಮಾನ ಮಾಡಿಸಿಕೊಳ್ಳುವ 103 ಜನರಲ್ಲಿ 86 ಮಂದಿ.ಏನೋ ಕಾರ್ಯಕ್ರಮ ಮುಗಿಯಿತು. ಆದರೆ ಒಂದು ಸ್ಥಳೀಯ ಸಂಸ್ಥೆಯ ಹೆಸರಲ್ಲಿ ಮಾಡಿದ ಸುವರ್ಣ ಮಹೋತ್ಸವದ ಲೆಕ್ಕಾಚಾರ ಮಾತ್ರ ಇಂದಿಗೂ ನಡೆದಿಲ್ಲ. ಇಂದು ಕೇಳಲು ಸದಸ್ಯರಿಗೆ ಅವಧಿ ಮುಗಿದು ಹೋಗಿದೆ. ಅವಧಿ ಇರುವಾಗ ವಿರೋಧ ಪಕ್ಷಕ್ಕೂ ಮತ್ತೆ ವಿರೋಧ ಪಕ್ಷದ ಮುಖಂಡರಿಗೂ ಧೈರ್ಯವಿದ್ದಿಲ್ಲ.

ಇದೀಗ ಮುಖ್ಯಾಧಿಕಾರಿ ಹುದ್ದೆ ತೊರೆಯುವಂತೆ ಆದೇಶ ಮೇ 7 ನೇ ತಾರೀಕು ಕೈ ಸೇರಿದರೂ ಕೂಡ, ಇನ್ನೂ ಕುರ್ಚಿ ಬಿಡುವ ಲಕ್ಷಣ ಕಾಣುತ್ತಿಲ್ಲ. ಏನಿದೆ ಎಷ್ಟಿದೆ ನಮ್ಮ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕೊಪ್ಪರಿಗೆಯಲ್ಲಿ……

Join WhatsApp

Join Now

Join Telegram

Join Now

Read more

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹5 ಲಕ್ಷ ಅನುದಾನ ಮಂಜೂರು; ಅಜಿತ್ ಕುಮಾರ್ ಶೆಟ್ಟಿ ಮನವಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಂದನೆ

ಸುಜ್ಞಾನದಂಗಳದಲ್ಲಿ ಮಂಥನ-2026 ಬೇಸಿಗೆ ಶಿಬಿರ ಶುಭಾರಂಭ: ಮಕ್ಕಳಲ್ಲಿರುವ ಪ್ರತಿಭೆಗನುಗುಣವಾಗಿ ಪೋಷಕರ ಪ್ರೋತ್ಸಾಹ ಅಗತ್ಯ – ಜಯಪ್ರಕಾಶ್ ಹೆಗ್ಡೆ

ಸಿದ್ದಾಪುರ: ಜ್ಞಾನ ಸರಸ್ವತಿ ಶಿಕ್ಷಣ ಸಂಸ್ಥೆಗೆ SSLC ಯಲ್ಲಿ 100 ಫಲಿತಾಂಶ. ಸಾಧನೆಗೈದ ವಿದ್ಯಾರ್ಥಿನಿಗೆ 25 ಸಾವಿರ ಪ್ರೋತ್ಸಾಹ ಧನ

ಬ್ರಹ್ಮಾವರ: ಭಕ್ತಿ ಭಾವದ ಸಿರಿ ಸಿಂಗಾರ ಕೋಲಾ ಸೇವೆ : ಸುಗ್ಗಿ ಸುಧಾಕರ್ ಶೆಟ್ಟಿ ನಿವಾಸದಲ್ಲಿ ಕೇಮಾರು ಈಶ ವಿಠಲ ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿ

ಸುಣ್ಣಾರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಬೆಸುಗೆ-2026’ ಬೇಸಿಗೆ ಶಿಬಿರಕ್ಕೆ ಚಾಲನೆ: ​ಸೃಜನಾತ್ಮಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಚೆಸ್ ಕ್ರೀಡಾಪಟು ಆರಾಧ್ಯ ಶೆಟ್ಟಿ

ಕೋಡಿ ಕನ್ಯಾನದ ಕಡಲ ತಡಿಯಲ್ಲಿ ಅದ್ದೂರಿ ‘ಜನಪದ ಸಿರಿ’ ಸಂಭ್ರಮ: ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಾವು ವಿಫಲರಾಗಿದ್ದೇವೆ – ಶಂಕರ್ ಕುಂದರ್

Leave a Comment