ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳ ಆಡಳಿತ ಮಂಡಳಿ ಚುನಾವಣೆ: ವಿವಿಧ ಕ್ಷೇತ್ರಗಳಿಂದ 8 ಮಂದಿ ಬಹುಮತದಿಂದ ಆಯ್ಕೆ

ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳ ಆಡಳಿತ ಮಂಡಳಿ ಚುನಾವಣೆ: ವಿವಿಧ ಕ್ಷೇತ್ರಗಳಿಂದ 8 ಮಂದಿ ಬಹುಮತದಿಂದ ಆಯ್ಕೆ


ಸಾಲಿಗ್ರಾಮ: ಸಾಲಿಗ್ರಾಮದ ಶ್ರೀಗುರುನರಸಿಂಹ ದೇವಳದ 2026–31ನೇ ಸಾಲಿನ ಆಡಳಿತ ಮಂಡಳಿಗೆ ಮಾರ್ಚ್ 15ರಂದು ಚುನಾವಣೆ ನಡೆಯಿತು. ಒಟ್ಟು ಆರು ಮತಕ್ಷೇತ್ರಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಕರ್ನಾಟಕೇತರ ಭಾರತದ ಇತರ ರಾಜ್ಯಗಳ ಮತಕ್ಷೇತ್ರದಿಂದ ಎಂ. ಲಕ್ಷ್ಮೀನಾರಾಯಣ ಹೊಳ್ಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದ ಐದು ಮತಕ್ಷೇತ್ರಗಳಿಗೆ ಇಂದು ಮತದಾನ ನಡೆಯಿತು. ಈ ಐದು ಕ್ಷೇತ್ರಗಳಿಂದ ಒಟ್ಟು 8 ಮಂದಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದು, ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು.

ಉಡುಪಿ ಜಿಲ್ಲೆಯ ಉಳಿದ ಭಾಗಗಳ ಮತಕ್ಷೇತ್ರದಿಂದ ಬೈಂದೂರಿನ ಬಿ. ಚಂದ್ರಶೇಖರ ನಾವಡ ಅವರು ಬಹುಮತದಿಂದ ಆಯ್ಕೆಯಾಗಿದ್ದಾರೆ.

ಬೆಂಗಳೂರು ಕಾರ್ಪೊರೇಷನ್ ಮತಕ್ಷೇತ್ರದಿಂದ ಜಿ. ಪ್ರಕಾಶ ಮಯ್ಯ ಅವರು ಬಹುಮತದಿಂದ ಗೆಲುವು ಸಾಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮತಕ್ಷೇತ್ರದಿಂದ ಪ್ರಕಾಶ ಕಾರಂತ ಅವರು ಆಯ್ಕೆಯಾಗಿದ್ದು, ಕರ್ನಾಟಕದ ಉಳಿದ ಭಾಗಗಳ ಮತಕ್ಷೇತ್ರದಿಂದ ಬಿ.ಜಿ. ಕೃಷ್ಣಮೂರ್ತಿ ಅವರು ಬಹುಮತದಿಂದ ಜಯಗಳಿಸಿದ್ದಾರೆ.

ಇದಲ್ಲದೆ ಸಾಲಿಗ್ರಾಮ ಮತಕ್ಷೇತ್ರದಿಂದ ಪ್ರಸನ್ನ ತುಂಗ, ಪರಶುರಾಮ ಭಟ್ಟ, ಕೆ. ತಾರಾನಾಥ ಹೊಳ್ಳ ಹಾಗೂ ಚಂದ್ರಶೇಖರ ಉಪಾಧ್ಯ ಅವರುಗಳು ಬಹುಮತದಿಂದ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಆಯ್ಕೆಯಾದ ಸದಸ್ಯರಿಗೆ ಭಕ್ತರು ಮತ್ತು ಸ್ಥಳೀಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Join WhatsApp

Join Now

Join Telegram

Join Now

Read more

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹5 ಲಕ್ಷ ಅನುದಾನ ಮಂಜೂರು; ಅಜಿತ್ ಕುಮಾರ್ ಶೆಟ್ಟಿ ಮನವಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಂದನೆ

ಉಡುಪಿ: ಬೈಂದೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮರಳಿ ಆರೋಗ್ಯ ಇಲಾಖೆಗೆ. ತತ್ ಕ್ಷಣ ಜಾರಿಗೆ ಆದೇಶ.

ಸುಜ್ಞಾನದಂಗಳದಲ್ಲಿ ಮಂಥನ-2026 ಬೇಸಿಗೆ ಶಿಬಿರ ಶುಭಾರಂಭ: ಮಕ್ಕಳಲ್ಲಿರುವ ಪ್ರತಿಭೆಗನುಗುಣವಾಗಿ ಪೋಷಕರ ಪ್ರೋತ್ಸಾಹ ಅಗತ್ಯ – ಜಯಪ್ರಕಾಶ್ ಹೆಗ್ಡೆ

ಸಿದ್ದಾಪುರ: ಜ್ಞಾನ ಸರಸ್ವತಿ ಶಿಕ್ಷಣ ಸಂಸ್ಥೆಗೆ SSLC ಯಲ್ಲಿ 100 ಫಲಿತಾಂಶ. ಸಾಧನೆಗೈದ ವಿದ್ಯಾರ್ಥಿನಿಗೆ 25 ಸಾವಿರ ಪ್ರೋತ್ಸಾಹ ಧನ

ಬ್ರಹ್ಮಾವರ: ಭಕ್ತಿ ಭಾವದ ಸಿರಿ ಸಿಂಗಾರ ಕೋಲಾ ಸೇವೆ : ಸುಗ್ಗಿ ಸುಧಾಕರ್ ಶೆಟ್ಟಿ ನಿವಾಸದಲ್ಲಿ ಕೇಮಾರು ಈಶ ವಿಠಲ ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿ

ಸುಣ್ಣಾರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಬೆಸುಗೆ-2026’ ಬೇಸಿಗೆ ಶಿಬಿರಕ್ಕೆ ಚಾಲನೆ: ​ಸೃಜನಾತ್ಮಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಚೆಸ್ ಕ್ರೀಡಾಪಟು ಆರಾಧ್ಯ ಶೆಟ್ಟಿ

Leave a Comment