ಮಂಗಳೂರಿನಲ್ಲಿ ನಡೆದ 76ನೇ ಭಾರತೀಯ ದಂತ ವೈದ್ಯರ ಸಮಾವೇಶ: IDA ಉಡುಪಿ ಘಟಕಕ್ಕೆ 6 ರಾಷ್ಟ್ರೀಯ ಪ್ರಶಸ್ತಿಗಳು

ಮಂಗಳೂರಿನಲ್ಲಿ ನಡೆದ 76ನೇ ಭಾರತೀಯ ದಂತ ವೈದ್ಯರ ಸಮಾವೇಶ: IDA ಉಡುಪಿ ಘಟಕಕ್ಕೆ 6 ರಾಷ್ಟ್ರೀಯ ಪ್ರಶಸ್ತಿಗಳು


ಮಂಗಳೂರು, ಫೆ.10:
ಮಂಗಳೂರಿನಲ್ಲಿ ನಡೆದ 76ನೇ ಭಾರತೀಯ ದಂತ ವೈದ್ಯರ ಸಮಾವೇಶದಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ (IDA) ಉಡುಪಿ ಘಟಕವು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. IDA ಉಡುಪಿ ಘಟಕದ ಮೊದಲ ಮಹಿಳಾ ಅಧ್ಯಕ್ಷೆ ಡಾ. ಯು.ಬಿ. ಶಬರಿ ಅವರ ನೇತೃತ್ವದ ತಂಡವು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಟ್ಟು ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಪ್ರಶಸ್ತಿಗಳನ್ನು ಡಾ. ಯು.ಬಿ. ಶಬರಿ, ಡಾ. ಅತುಲ್ ಯು.ಆರ್, ಡಾ. ಕೈಲ್ಕೆರೆ ಸುಜನ್ ಶೆಟ್ಟಿ, ಡಾ. ಶ್ರೀಧರ್ ಶೆಟ್ಟಿ ಹಾಗೂ ಡಾ. ಪ್ರತೀಕ್ಷಾ ಶೆಟ್ಟಿ ಅವರು ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್‌ನ ರಾಷ್ಟ್ರೀಯ ಅಧ್ಯಕ್ಷರಾದ ಡಾ. ನಿಖಿಲ್ ಬಾರ್ವೆ, ರಾಷ್ಟ್ರೀಯ ಕಾರ್ಯದರ್ಶಿ ಡಾ. ಅಶೋಕ್ ಧೋಬ್ಲೆ, ಡಾ. ಅಜಿತ್ ಕದಮ್ ಹಾಗೂ ಡಾ. ಪ್ರಮೋದ್ ಶೆಟ್ಟಿ ಅವರು ಉಪಸ್ಥಿತರಿದ್ದು.

ಪ್ರಶಸ್ತಿ ವಿಜೇತರಿಗೆ ಗೌರವ ಪ್ರದಾನ ಮಾಡಿ ಮಾತನಾಡಿದ ಗಣ್ಯರು, IDA ಉಡುಪಿ ಘಟಕವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ದಂತ ವೈದ್ಯಕೀಯ ಕ್ಷೇತ್ರಕ್ಕೆ ನೀಡುತ್ತಿರುವ ನಿರಂತರ ಸೇವೆ ಶ್ಲಾಘನೀಯವಾಗಿದ್ದು, ಡಾ. ಯು.ಬಿ. ಶಬರಿ ಅವರ ನಾಯಕತ್ವವು ಇತರ ಘಟಕಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.

IDA ಉಡುಪಿ ಘಟಕದ ಈ ಸಾಧನೆ ಉಡುಪಿ ಜಿಲ್ಲೆಯ ದಂತ ವೈದ್ಯಕೀಯ ಕ್ಷೇತ್ರಕ್ಕೆ ಹೆಮ್ಮೆ ತಂದುಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವ ವಿಶ್ವಾಸವನ್ನು ಮೂಡಿಸಿದೆ ಎಂದು ಹೇಳಿದರು.

Join WhatsApp

Join Now

Join Telegram

Join Now

Read more

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹5 ಲಕ್ಷ ಅನುದಾನ ಮಂಜೂರು; ಅಜಿತ್ ಕುಮಾರ್ ಶೆಟ್ಟಿ ಮನವಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಂದನೆ

ಉಡುಪಿ: ಬೈಂದೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮರಳಿ ಆರೋಗ್ಯ ಇಲಾಖೆಗೆ. ತತ್ ಕ್ಷಣ ಜಾರಿಗೆ ಆದೇಶ.

ಸುಜ್ಞಾನದಂಗಳದಲ್ಲಿ ಮಂಥನ-2026 ಬೇಸಿಗೆ ಶಿಬಿರ ಶುಭಾರಂಭ: ಮಕ್ಕಳಲ್ಲಿರುವ ಪ್ರತಿಭೆಗನುಗುಣವಾಗಿ ಪೋಷಕರ ಪ್ರೋತ್ಸಾಹ ಅಗತ್ಯ – ಜಯಪ್ರಕಾಶ್ ಹೆಗ್ಡೆ

ಸಿದ್ದಾಪುರ: ಜ್ಞಾನ ಸರಸ್ವತಿ ಶಿಕ್ಷಣ ಸಂಸ್ಥೆಗೆ SSLC ಯಲ್ಲಿ 100 ಫಲಿತಾಂಶ. ಸಾಧನೆಗೈದ ವಿದ್ಯಾರ್ಥಿನಿಗೆ 25 ಸಾವಿರ ಪ್ರೋತ್ಸಾಹ ಧನ

ಬ್ರಹ್ಮಾವರ: ಭಕ್ತಿ ಭಾವದ ಸಿರಿ ಸಿಂಗಾರ ಕೋಲಾ ಸೇವೆ : ಸುಗ್ಗಿ ಸುಧಾಕರ್ ಶೆಟ್ಟಿ ನಿವಾಸದಲ್ಲಿ ಕೇಮಾರು ಈಶ ವಿಠಲ ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿ

ಸುಣ್ಣಾರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಬೆಸುಗೆ-2026’ ಬೇಸಿಗೆ ಶಿಬಿರಕ್ಕೆ ಚಾಲನೆ: ​ಸೃಜನಾತ್ಮಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಚೆಸ್ ಕ್ರೀಡಾಪಟು ಆರಾಧ್ಯ ಶೆಟ್ಟಿ

Leave a Comment