ಕುಂದಾಪುರ: ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ 9ನೇ ರ‍್ಯಾಂಕ್ – ಆಡಳಿತ ಮಂಡಳಿಯಿಂದ 50 ಸಾವಿರ ನಗದು ಪುರಸ್ಕಾರ.
ಕುಂದಾಪುರ : ಸುಜ್ಞಾನ ವಿದ್ಯಾ ಸಂಸ್ಥೆಯು, PUC ಶಿಕ್ಷಣದ ಚೊಚ್ಚಲ ಪ್ರಯತ್ನದಲ್ಲಿಯೇ ಅದ್ಭುತ ಫಲಿತಾಂಶ ದಾಖಲಿಸಿದ್ದು, ನಮ್ಮ ಸಂಸ್ಥೆಯ ಮೇಲೆ ಪೋಷಕರು ಇಟ್ಟ ನಂಬಿಕೆಗೆ ಇದು ಉತ್ತಮ ಕೊಡುಗೆ ಎಂದು ಸುಜ್ಞಾನ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹರ್ಷ ವ್ಯಕ್ತ ಪಡಿಸಿದರು. ಶುಕ್ರವಾರ ಸುಜ್ಞಾನ ವಿದ್ಯಾ ಸಂಸ್ಥೆಯಲ್ಲಿ ನಡೆದ ಪಾತ್ರಿಕಾ ಗೋಷ್ಠಿಯಲ್ಲಿಮಾತನಾಡಿ, ನಮ್ಮ ವಿದ್ಯಾ ಸಂಸ್ಥೆಯ ಪ್ರಥಮ ಬ್ಯಾಚ್ ಶೇ. 100 ಫಲಿತಾಂಶ ಸಾದಿಸಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಸ್ಪಂದನಾ ಇವರು 9ನೇ ರ‍್ಯಾಂಕ್ ಪಡೆದು ನಮ್ಮ ಸುಜ್ಞಾನ ವಿದ್ಯಾ ಸಂಸ್ಥೆಯ ಘನತೆ ಹೆಚ್ಚಿಸಿರುತ್ತಾರೆ. ಸುಜ್ಞಾನ ವಿದ್ಯಾಸಂಸ್ಥೆ ಈ ಹಿಂದೆ ಘೋಷಿಸಿದಂತೆ 50,000 ರೂಪಾಯಿಗಳ ಪ್ರೋತ್ಸಾಹಿಕ ಬಹುಮಾನ ನೀಡಿ ಗೌರವ ಸಲ್ಲಿಸಿದ್ದೇವೆ ಎಂದರು.
SSLC ಫಲಿತಾಂಶದಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು, ಸುಜ್ಞಾನ ವಿದ್ಯಾ ಸಂಸ್ಥೆಯಲ್ಲಿ PUC ತರಗತಿಗೆ ಸೇರಿದ ನಂತರ,ಇದೀಗ ಉತ್ತಮ ಫಲಿತಾಂಶ ಪಡೆದಿರುತ್ತಾರೆ. ಸ್ಪಂದನಾ ಆರ್ ಶೆಟ್ಟಿ ಇವರು SSLC ಯಲ್ಲಿ ಶೇ 84ಅಂಕ ಪಡೆದಿದ್ದು ಇದೀಗ ನಮ್ಮ ಸುಜ್ಞಾನ ವಿದ್ಯಾ ಸಂಸ್ಥೆ ಸೇರಿ ದ್ವಿತೀಯ PUC ಯಲ್ಲಿ ಶೇ.98.7 ಅಂಕ ಪಡೆದು ರಾಜ್ಯದಲ್ಲಿ 9ನೇ ಸ್ಥಾನ ಪಡೆದಿರುತ್ತಾರೆ. ಸೋಮನಗೌಡ ಇವರು SSLC ಯಲ್ಲಿ ಶೇ. 49.28 ಅಂಕ ಪಡೆದಿದ್ದು ಇದೀಗ ಸುಜ್ಞಾನ ವಿದ್ಯಾ ಸಂಸ್ಥೆಯಲ್ಲಿ ಕಲಿತು ದ್ವಿತೀಯ PUC ಫಲಿತಾಂಶದಲ್ಲಿ 88.50ಗಳಿಸಿ ಅಚ್ಚರಿ ಮೂಡಿಸುವ ಸಾಧನೆ ಮಾಡಿದ್ದಾರೆ.ರಾಘವೇಂದ್ರ ಇವರು ಶೇ. 51.52 ಅಂಕ ಪಡೆದು ಇದೀಗ ಶೇ. 89.77 ಗಳಿಸಿರುತ್ತಾರೆ.
ಇದು ಪೋಷಕರು ನಮ್ಮ ಮೇಲೆ ಇಟ್ಟಿರುವ ಭರವಸೆಗೆ ಸಂದ ಗೌರವ ಎಂದು ಸುಜ್ಞಾನ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ತಿಳಿಸಿದರು.

ದಾಖಲಾತಿ ಸಮಯದಲ್ಲಿ ಶೇ. 95ಕ್ಕಿಂತ ಜಾಸ್ತಿ ಅಂಕ ಪಡೆದವರು 9 ಮಂದಿ ಇದ್ದು, ಇದೀಗ ಫಲಿತಾಂಶದ ನಂತರ 22 ಕ್ಕೆ ದಾಖಲಾತಿ ಕಂಡಿದೆ. ಇದು ಬೋಧಕ ವರ್ಗದ ಶ್ರಮ ಮತ್ತು ವಿದ್ಯಾರ್ಥಿಗಳ ಸಂಕಲ್ಪಕ್ಕೆ ದೊರೆತ ಫಲ ಎಂದರು.
ವಿಜ್ಞಾನ ವಿಭಾಗದಲ್ಲಿ ಸಮ್ಮೇದ ಪಾರೀಸ ಭೋಜ 587 ಅಂಕಗಳಿಸಿ ನಮ್ಮ ಶಿಕ್ಷಣ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ಕನ್ನಡ ಮಾಧ್ಯಮದಲ್ಲಿ ಕಲಿತು ಬಂದ ಈ ವಿದ್ಯಾರ್ಥಿ, ಫಿಸಿಕ್ಸ್ ಮತ್ತು ಮಾಥ್ಸ್ ವಿಷಯದಲ್ಲಿ 100 ಕ್ಕೆ 100 ಪಡೆದು ಕೊಂಡಿದ್ದು ದೊಡ್ಡ ಸಾಧನೆ. ಸಿಂಚನಾ 586,ಪ್ರತೀಕ್ಷಾ ಎಚ್ ಶೆಟ್ಟಿ 586,ಎನ್ ರಕ್ಷಾ ಶೆಟ್ಟಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಹೆಮ್ಮೆಯ ವಿಷಯ ಎಂದು ಭರತ್ ಶೆಟ್ಟಿ ಸಂಭ್ರಮ ವ್ಯಕ್ತ ಪಡಿಸಿದರು.
ವಿಳಂಬವಾಗಿ ತರಗತಿ ಆರಂಭವಾದರೂ ಕೂಡ ವಿಶೇಷವಾದ ಫಲಿತಾಂಶ ಬಂದಿರುವುದು ಸುಜ್ಞಾನ ವಿದ್ಯಾ ಸಂಸ್ಥೆಯ ಗುಣಮಟ್ಟದ ಬೋಧನೆಯೇ ಕಾರಣ.
ಪರೀಕ್ಷೆ ಎದುರಿಸಿದ 125 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, 22 ವಿದ್ಯಾರ್ಥಿಗಳು ಶೇ. 95 ಕ್ಕಿಂತ ಹೆಚ್ಚು, 57 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಅಧಿಕ ಅಂಕಗಳಿಸಿರುವುದು ಸುಜ್ಞಾನ ವಿದ್ಯಾ ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ ಎಂದು ಸಂತೋಷ ವ್ಯಕ್ತ ಪಡಿಸಿದರು.
ಬಾರ್ಕೂರು ನ್ಯಾಷನಲ್ ಜೂನಿಯರ್ ಕಾಲೇಜ್ ಇದರ ಜವಾಬ್ದಾರಿ ಕೂಡ ಸುಜ್ಞಾನ ವಿದ್ಯಾ ಸಂಸ್ಥೆ ವಹಿಸಿದ್ದು,ಮುಂದಿನ ದಿನಗಳಲ್ಲಿ ಅಲ್ಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡ ಉತ್ತಮ ಫಲಿತಾಂಶ ಪಡೆಯುವಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ವಿದ್ಯಾ ಸಂಸ್ಥೆ ಬದ್ದವಾಗಿದೆ ಎಂದರು.
ಪ್ರಾಂಶುಪಾಲರಾದ ರಂಜನ್ ಶೆಟ್ಟಿ, ಹಾಗೂ ಶಿಕ್ಷಣ ಸಂಸ್ಥೆಯ ಬೋಧಕರು ಉಪಸ್ಥಿತರಿದ್ದರು.





