
ಬ್ರಹ್ಮಾವರ: ವಿದ್ಯಾರ್ಥಿವೇತನ ಎನ್ನುವುದು ವಿದ್ಯಾರ್ಥಿಗಳ ಪ್ರತಿಭೆಗೆ ಸಿಗುವ ಗೌರವ. ವಿದ್ಯಾರ್ಥಿಗಳು ಅಂಕಗಳಿಕೆಯೇ ಶಿಕ್ಷಣದ ಗುರಿ ಎನ್ನುವ ಮನೋಭಾವನೆಯಿಂದ ಹೊರಬರಬೇಕು.ಸಮಾಜದಲ್ಲಿ ನಿಮ್ಮ ಹಕ್ಕಿಗಾಗಿ ಪ್ರೆಶ್ನೆ ಮಾಡುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಎಂದು ಮಾಜೀ ಸಂಸದರು ಮತ್ತು ಮಾಜೀ ಸಚಿವ ಜಯಪ್ರಕಾಶ್ ಹೆಗ್ಡೆ ಕರೆ ನೀಡಿದರು.
ಸುಜ್ಞಾನ ಎಜುಕೇಷನಲ್ ಸೊಸೈಟಿ ಮತ್ತು ಬಾರಕೂರು ಎಜುಕೇಷನ್ ಸೊಸೈಟಿ ಇವರ ಜಂಟಿ ಆಶ್ರಯದಲ್ಲಿ, ಬಾರಕೂರಿನ ಸುಜ್ಞಾನ PU ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ, ವಿದ್ಯಾರ್ಥಿ ವೇತನ ಪರೀಕ್ಷೆ, ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಲ್ಲದೇ ಶಿಕ್ಷಣದ ಜೊತೆ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿ ವಿಷಯದಲ್ಲೂ ಕೂಡ ಮಕ್ಕಳಲ್ಲಿ ಆಸಕ್ತಿಗಳಿಗೆ ಅವಕಾಶ ನೀಡುವಂತೆ ಪೋಷಕರಿಗೆ ಸಲಹೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಪೂರ್ವ ಸಿದ್ಧತೆ ಅತ್ಯಗತ್ಯ. ಆದ್ದರಿಂದ ತರಗತಿಯಲ್ಲಿ ಕಲಿತ ವಿಷಯವನ್ನು ಪ್ರಾಯೋಗಿಕವಾಗಿ ಆಳವಡಿಸಿಕೊಳ್ಳುವ ಇಚ್ಚಾಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿ ಕೊಳ್ಳಬೇಕು ಎಂದು ತಿಳಿಸಿದರು. ಸಮಾಜಕ್ಕೆ ಮಾರಕವಾಗಿ ಬೆಳೆಯುತ್ತಿರುವ ಡ್ರಗ್ಸ್ ಮತ್ತು ಬೆಟ್ಟಿಂಗ್ ಮಾಫಿಯಾದಿಂದ ದೂರವಿರಬೇಕು. ಅಲ್ಲದೇ ಸಾಧನೆಯ ನಂತರ ಮತ್ತೆ ನೀವು ಕೂಡ ಸಮಾಜದ ಅಭಿವೃದ್ಧಿಗೆ ಕೊಡುಗೆ ಕೊಡುವ ಮಟ್ಟದಲ್ಲಿ ತಮ್ಮ ಮನೋಭಾವನೆ ಹೊಂದಿರಬೇಕು ಎಂದರು.

ಸೋಲೇ ಗೆಲುವಿಗೆ ಏಣಿ : ಠಾಣಾಧಿಕಾರಿ ಅಶೋಕ್.
ಮೊದಲ ಬಾರಿ ನಾನು 0.25 ಅಂಕಗಳ ಅಂತರದಲ್ಲಿ PSI ಹುದ್ದೆಗೆ ವಂಚಿತನಾದಗಲೂ ಧ್ರತಿಗೆಡದೆ, ಮತ್ತೆ ಸತತವಾಗಿ ಪ್ರಯತ್ನ ಮಾಡಿದಾಗ ಮತ್ತೆ 2018ರಲ್ಲಿ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾದೆ. ಸೋಲು ಎನ್ನುವುದು ಅಂತ್ಯವಲ್ಲ. ಅದು ಯಶಸ್ಸಿನ ಹಾದಿಯ ಪಾಠ ಎನ್ನುವುದನ್ನು ವಿದ್ಯಾರ್ಥಿಗಳು ತಿಳಿಯಬೇಕು ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಆಶಾಧಾಯಕ ಮಾತುಗಳನ್ನಾಡಿದರು.

PUC : ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟ. ಪ್ರೊ.ಬಾಲಕೃಷ್ಣ ಶೆಟ್ಟಿ.
ರಾಮಕೃಷ್ಣ ಎಜುಕೇಷನಲ್ ಸೊಸೈಟಿ ಮಂಗಳೂರು ಇದರ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, PUC ಶಿಕ್ಷಣ 2 ವರ್ಷಗಳ ಶ್ರಮವು ,ಮುಂದಿನ 70 ವರ್ಷದ ನಿಮ್ಮ ಬದುಕನ್ನು ಹಸನಾಗಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ 4 C ಗಳಿಂದ ದೂರವಿರಬೇಕು. 4 C ಅಂದರೆ ಕ್ರಿಕೆಟ್, ಸಿನಿಮಾ,ಮೊಬೈಲ್,ಅನಗತ್ಯ ಹರಟೆ ಇವುಗಳಿಂದ ದೂರ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಬುದ್ದಿ ಮಾತುಗಳನ್ನಾಡಿದರು.

ಶಿಕ್ಷಣ ಸಂಸ್ಥೆ ಹಿತದ್ರಷ್ಟಿಯಿಂದ ಆಡಳಿತಾತ್ಮಕ ಒಪ್ಪಂದ : ಶಾಂತರಾಮ್ ಶೆಟ್ಟಿ.
ಸಭಾಧ್ಯಕ್ಷತೆ ವಹಿಸಿದ ಬಾರ್ಕುರು ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಶಾಂತರಾಮ್ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆಗೆ 80 ವರ್ಷದ ಇತಿಹಾಸವಿದೆ. ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಗಾಗಿ ಸುಜ್ಞಾನ ವಿದ್ಯಾ ಸಂಸ್ಥೆಯೊಂದಿಗೆ ಆಡಳಿತಾತ್ಮಕ ಒಪ್ಪಂದ ಮಾಡಿ ಕೊಳ್ಳಲಾಗಿದೆ ಎಂದರು. ಸುಜ್ಞಾನ ವಿದ್ಯಾ ಸಂಸ್ಥೆ ಸಣ್ಣ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ದಕ್ಷ ಆಡಳಿತಕ್ಕೆ ಹೆಸರು ಮಾಡಿದ್ದು, ಈ ಪರಿಸರದಲ್ಲೂ ಕೂಡ ಶೈಕ್ಷಣಿಕ ಕ್ರಾಂತಿ ಮಾಡುವ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಗ್ರಾಮೀಣ ವಿದ್ಯಾರ್ಥಿಗಳು ಕಂಡ ಕನಸ್ಸಿಗೆ ಸುಜ್ಞಾನ ಆಸರೆ. ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ.
ಸುಜ್ಞಾನ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರ 30 ವರ್ಷದ ಶೈಕ್ಷಣಿಕ ಅನುಭವದಲ್ಲಿ ಈ ಸಂಸ್ಥೆ ಇಂದು ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಬೆಳೆಯಲಿದೆ ಎಂದು ಸುಜ್ಞಾನ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.

IIT & ನೀಟ್ ಕನಸ್ಸಿಗೆ ಸುಜ್ಞಾನ ವಿದ್ಯಾ ಸಂಸ್ಥೆ ಆಸರೆ. ಖಜಾಂಚಿ ಭರತ್ ಶೆಟ್ಟಿ.
ಗ್ರಾಮೀಣ ಪ್ರದೇಶದ ಆಸಕ್ತರ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಕೂಡ ಐ ಐ ಟಿ ಯಂತಹ ಪ್ರತಿಷ್ಟಿತ ಸಂಸ್ಥೆ ಸೇರಬಹುದು ಎನ್ನುವುದಕ್ಕೆ ನಮ್ಮ ಸಂಸ್ಥೆಯ ಹಳೆವಿದ್ಯಾರ್ಥಿಗಳ ಸಾಧನೆಯೇ ಸಾಕ್ಷಿಯಾಗಿದೆ. ಇಂದಿನ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿನ ಸಾಧನೆಯ ಆಧಾರದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಶೇ. 50 ರಿಂದ ಶೇ. 100ರವರಗೆ ಶುಲ್ಕ ರಿಯಾಯಿತಿ ನೀಡಲಾಗುವುದು. ವಿದ್ಯಾರ್ಥಿಗಳಿಗೆ ದೆಹಲಿಯಿಂದ ತರಿಸಲಾದ ಉತ್ತಮ ಗುಣಮಟ್ಟದ N C E R T ಆಧಾರಿತ ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುವುದು. ಬಾರ್ಕುರು ಎಜುಕೇಷನ್ ಸೊಸೈಟಿಯವರ ಆಶಯದಂತೆ ಕನಿಷ್ಠ ವೆಚ್ಚದಲ್ಲಿ ವಿಶ್ವ ದರ್ಜೆಯ ಶಿಕ್ಷಣ ನೀಡಲಾಗುವುದು
ಎಂದು ಸುಜ್ಞಾನ ವಿದ್ಯಾಸಂಸ್ಥೆಯ ಖಜಾಂಚಿ ಭರತ್ ಕುಮಾರ್ ಶೆಟ್ಟಿ.
ಸುಜ್ಞಾನ ಎಜುಕೇಷನಲ್ ಸೊಸೈಟಿ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ಬಾರ್ಕುರು ಎಜುಕೇಷನ್ ಸೊಸೈಟಿ ಉಪಾಧ್ಯಕ್ಷರಾದ ಶೇಡಿಕೊಡ್ಲು ವಿಠಲ್ ಶೆಟ್ಟಿ, ಸಂಚಾಲಕರಾದ ರಾಜ್ ಗೋಪಾಲ ನಂಬಿಯರ್, ಆಡಳಿತಾಧಿಕಾರಿ ಕ್ರಷ್ಣ ಹೆಬ್ಬಾರ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿ ವೇತನ ಪರೀಕ್ಷೆಗೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು.





