ಬ್ರಹ್ಮಾವರ ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್ ಹೌಸ್ ಲೋಕಾರ್ಪಣೆ: ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು – ಉದ್ಯಮಿ ಆನಂದ್ ಸಿ ಕುಂದರ್

ಬ್ರಹ್ಮಾವರ ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್ ಹೌಸ್ ಲೋಕಾರ್ಪಣೆ: ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು – ಉದ್ಯಮಿ ಆನಂದ್ ಸಿ ಕುಂದರ್


ಬ್ರಹ್ಮಾವರ: ಎರಡು ದಶಕಗಳ ಹಿಂದೆ ಕ್ರೀಡಾಸಕ್ತರು ಆರಂಭಸಿದ ಈ ಸಂಸ್ಥೆ ಇಂದು ಮೂರು ಎಕರೆ ವಿಶಾಲವಾದ ಜಾಗದಲ್ಲಿ ಸುಸಜ್ಜಿತವಾದ ಸ್ಪೋರ್ಟ್ಸ್ ಕ್ಲಬ್ ಹೌಸ್ ಆಗಿ ರೂಪುಗೊಂಡಿದೆ.


ಇದು ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು. ಇದು ಕೇವಲ ಮನರಂಜನೆಗೆ ಸೀಮಿತವಾಗದೇ, ಇಲ್ಲಿನ ಸೌಲಭ್ಯಗಳನ್ನು ಬಳಸಿ ಕೊಂಡು ಗ್ರಾಮೀಣ ಭಾಗದ ಮಕ್ಕಳು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ನಾವು ಸರಕಾರದವರು ಮಾಡಬೇಕಾದ ಕರ್ತವ್ಯವನ್ನು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಹೌಸ್ ಇವರು ಮಾಡಿ ತೋರಿಸಿದ್ದಾರೆ.
ನಮ್ಮ ಸರ್ಕಾರಗಳ ಅನುದಾನ ಇಲ್ಲದೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗದಲ್ಲಿ, ಸುಸಜ್ಜಿತವಾದ ಸ್ಪೋರ್ಟ್ಸ್ ಕ್ಲಬ್ ಹೌಸ್ ಮಾಡಿ ಸಮಾಜಕ್ಕೆ ಅರ್ಪಿಸಿರುವುದು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಹೌಸ್ ಇವರ ಸಾಮಾಜಿಕ ಕಳಕಳಿಗೆ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೆಚ್ಚುಗೆ ವ್ಯಕ್ತ ಪಡಿಸಿದರು.
500 ಕ್ಕೂ ಅಧಿಕ ಸಂಖ್ಯೆಯ ಸದಸ್ಯರನ್ನು ಒಗ್ಗೂಡಿಸಿ ಇಷ್ಟು ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಿದ್ದು ಅತೀ ದೊಡ್ಡ ಸಾಧನೆ. ಇದರ ಮುಂದಿನ ಯೋಜನೆಗೆ ಕೇಂದ್ರ ಸರಕಾರದಿಂದ ಸಹಕಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಸಿಗುವಂತಾಗಲಿ. ಶಾಸಕ ಯಶಪಲ್ ಸುವರ್ಣ.
ಸ್ಥಳೀಯ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿ ರಾಷ್ಟೀಯ ಮಟ್ಟದಲ್ಲಿ ಸ್ಪರ್ದಿಸುವ ಅವಕಾಶ ಕಲ್ಪಿಸಿ ಕೊಟ್ಟ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಹೌಸ್ ಈ ಸಂಸ್ಥೆಗೆ ಮುಂದಿನ ವರ್ಷದಲ್ಲಿ ರಾಜ್ಯ ರಾಜ್ಯೋತ್ಸವದ ಪುರಸ್ಕಾರ ಸಿಗುವಂತಾಗಲಿ ಎಂದು ಸಭಾ ಅಧ್ಯಕ್ಷರ ನೆಲೆಯಲ್ಲಿ ಉಡುಪಿ ಶಾಸಕ ಯಶಪಲ್ ಸುವರ್ಣ ಶುಭ ಹಾರೈಸಿದರು.


ಕ್ರೀಡಾ ಯಶಸ್ಸಿಗೆ ದೈಹಿಕ ಸದೃಢತೆಯೊಂದಿಗೆ ಮಾನಸಿಕ ಸ್ಥಿರತೆಯೂ ಮುಖ್ಯ. ಮಾಜೀ ಸಚಿವ ಜಯಪ್ರಕಾಶ್ ಹೆಗ್ಡೆ:
ಕೇವಲ ಭಜನೆ ಅಥವಾ ಓದಿಗೆ ಮಕ್ಕಳನ್ನು ಸೀಮಿತಗೊಳಿಸದೇ, ಸಂಗೀತ ನೃತ್ಯ ಮತ್ತು ಕ್ರೀಡೆಯಲ್ಲೂ ತೊಡಗಿಸಿದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಶಿಕ್ಷಣವನ್ನು ಕೇವಲ ಅಕ್ಷರಭ್ಯಾಸ ಮಾತ್ರವಲ್ಲ. ಮಗುವಿನ ಪ್ರತಿ ಬೆಳವಣಿಗೆಗೆ ಕ್ರೀಡೆಯೂ ಕೂಡ ಮುಖ್ಯವಾಗಿದೆ ಎಂದರು.
ಸಂಸ್ಥೆಯ ಗೌರವಾಧ್ಯಕ್ಷರಾದ ಚಂದ್ರಶೇಖರ ಹೆಗ್ಡೆ ಅವರ ಶಿಸ್ತು ಮತ್ತು ಕ್ರೀಡಾ ಕಾಳಜಿ ಅನನ್ಯವಾಗಿದ್ದು, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಗೆ ಅವರ ಸೇವೆ ಅನನ್ಯವಾದುದು. ಅವರ ಹೆಸರನ್ನು ಸಂಸ್ಥೆಗೆ ಇಟ್ಟಿದು ಅವರ ನಿಸ್ವಾರ್ಥ ಸೇವೆಗೆ ನೀವು ಸಲ್ಲಿಸಿದ ಗೌರವ ಎಂದು ಶ್ಲಾಘಸಿದರು.


ಕ್ಲಬ್ ಹೌಸ್ ನಿರ್ಮಾಣ ಸರ್ವರ ಸಹಕಾರದ ಫಲ.ಬಿಜು. ಜಿ. ನಾಯರ್:
ರಾಜ್ಯದ ಅತ್ತ್ಯುತ್ತಮ ಕ್ಲಬ್ ಗಳಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಹೌಸ್ ಕೂಡ ಒಂದು. ಪ್ರಾರಂಭದಿಂದ ಇಂದಿನವರೆಗಿನ ಪ್ರತಿ ಸದಸ್ಯರ ಪರಿಶ್ರಮದಿಂದಲೇ ಇಂತಹ ಸುಸಜ್ಜಿತವಾದ ಕ್ಲಬ್ ಹೌಸ್ ಆಗಿ ಮೂಡಿ ಬಂದಿದೆ.
ನಮ್ಮಲ್ಲಿ ಅತ್ಯಾಧುನಿಕ ರೀತಿಯಲ್ಲಿ ರೂಪುಗೊಂಡಿರುವ ಸ್ವೀಮ್ಮಿಂಗ್ ಫುಲ್, ಸ್ನೂಕರ್, ಬ್ಯಾಡ್ಮಿಂಟನ್ ಮತ್ತು ಟೆನಿಸ್ ಕೋರ್ಟ್ ರಚನೆಯಾಗಿದ್ದು ಸ್ಥಳೀಯರು ಕುಟುಂಬ ಸಹಿತ ಸೇವೆ ಪಡೆಯ ಬಹುದು ಎಂದು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಹೌಸ್ ಇದರ ಅಧ್ಯಕ್ಷರು ಆಗಿರುವ ಬಿಜು. ಜಿ. ನಾಯರ್ ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಹೌಸ್ ಗೌರವಾಧ್ಯಕ್ಷರಾದ ಎಂ ಚಂದ್ರಶೇಖರ ಹೆಗ್ಡೆ,ಉಡುಪಿ ಮಾಜೀ ಶಾಸಕ ರಘುಪತಿ ಭಟ್,ಡಾ. ಪ್ರವೀಣ್ ಕುಮಾರ್, ಉದ್ಯಮಿ ಎಸ್. ಆರ್. ಗುಣಶೀಲ ರೆಡ್ಡಿ,, ಎನ್. ಎನ್ ಟ್ರೇಡರ್ಸ್ ಮಾಲಕರಾದ ಪೀಟರ್ ಡಿಸೋಜ, ಸಂಪತ್ ಶೆಟ್ಟಿ, ಎಚ್. ಶಶಿಧರ್ ಶೆಟ್ಟಿ, ಸ್ಪೋರ್ಟ್ಸ್ ಕ್ಲಬ್ ಇದರ ಖಜಾಂಚಿ ವಿಕ್ರಂ ಪ್ರಭು, ಕಾರ್ಯದರ್ಶಿ ಗ್ರೇಗೋರಿ ಡಿಸಿಲ್ವ್ ಉಪಸ್ಥಿತರಿದ್ದರು.
ಶ್ರೀಮತಿ ಸುಶೀಲ ರೈ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರತಿಮಾ ಅರುಣ್ ಶೆಟ್ಟಿ ಪ್ರಾರ್ಥಿಸಿದ್ದು, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಧನ್ಯವಾದ ಸಲ್ಲಿಸಿದರು. ಕೆ. ಸಿ. ರಾಜೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Join WhatsApp

Join Now

Join Telegram

Join Now

Read more

ಕುಂದಾಪುರ: ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿಯಲ್ಲಿ ಗುರುವಂದಾನ ಕಾರ್ಯಕ್ರಮ

ವಿದ್ಯಾರಣ್ಯ ಅಂಗಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಕರಾವಳಿ ಸೊಗಡಿನ ವೇಷ ಭೂಷಣ,ಶಾಸ್ತ್ರ, ಸಂಪ್ರದಾಯಗಳ ವೈಭವದ ಮೆರವಣಿಗೆ

ಕೋಟ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ರಘು ಮಧ್ಯಸ್ಥ ಅವಿರೋಧ ಆಯ್ಕೆ

ಸುಜ್ಞಾನ ವಿದ್ಯಾ ಸಂಸ್ಥೆಯಲ್ಲಿ ‘ವಾಲ್ಬೆಲ್ಲ’ ಕುಂದಾಪ್ರ ಕನ್ನಡದ ಸಂಸ್ಕೃತಿ ಸಮಾರಂಭದ ಸಮಾರೋಪ: ಯುವಜನತೆ ದುಶ್ಚಟಗಳಿಂದ ದೂರವಿದ್ದು ಗುರಿಯತ್ತ ಸಾಗಬೇಕು – ಕೆ. ಜಯಪ್ರಕಾಶ್ ಹೆಗ್ಡೆ

ಸುಜ್ಞಾನದಂಗಳದಿ ವಾಲ್ಬೆಲ್ಲದ ಸವಿ ಸಂಭ್ರಮ: ಕುಂದಾಪ್ರ ಕನ್ನಡದ ಅಭಿವೃದ್ಧಿಗೆ ದಿಟ್ಟ ಹೆಜ್ಜೆ: ಕುಂದಾಪ್ರ ಕನ್ನಡದ ಸವಿ ಉಳಿಸಿ ಬೆಳಸುವ ಜವಾಬ್ದಾರಿ ನಮ್ಮದು.ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ

ವಿದ್ಯಾರಣ್ಯ ಶಾಲೆ ಯಡಾಡಿ – ಮತ್ಯಾಡಿಯಲ್ಲಿ ಜುಲೈ 6 ರಂದು ಕುಂದಾಪ್ರ ಕನ್ನಡ ‘ವಾಲ್ಪೆಲ್ಲ’ ಕಾರ್ಯಕ್ರಮ: ಕುಂದಾಪ್ರ ಕನ್ನಡದ ಅಭಿಮಾನ ಬೆಳೆಸಿ ಕೊಳ್ಳ ಬೇಕು – ಕೆ. ಜಯಪ್ರಕಾಶ್ ಹೆಗ್ಡೆ

Leave a Comment