ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್,ಉಪಾಧ್ಯಕ್ಷರಾಗಿ ಚಂದ್ರಶೇಖರ ಉಪಾಧ್ಯ, ಕಾರ್ಯದರ್ಶಿ ಪರುಷರಾಮ್ ಭಟ್, ಕೋಶಾಧಿಕಾರಿ ಎಂ.ಲಕ್ಷ್ಮಿ ನಾರಾಯಣ ಹೊಳ್ಳ ನೇಮಕ

ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ 2026-31ನೇ ಸಾಲಿನ ಆಡಳಿತ ಮಂಡಳಿಗೆ ಮಾರ್ಚ್ 15ರಂದು ಚುನಾವಣೆ ನಡೆದಿತ್ತು. ಒಟ್ಟು ಆರು ಕ್ಷೇತ್ರಗಳಲ್ಲಿ ಕರ್ನಾಟಕೇತರ ಭಾರತದ ಇತರ ರಾಜ್ಯಗಳಲ್ಲಿ ಎಂ ಲಕ್ಷ್ಮೀನಾರಾಯಣ ಹೊಳ್ಳರು ಅವಿರೋಧ ಆಯ್ಕೆಯಾಗಿದ್ದು ಉಳಿದ ಐದು ಕ್ಷೇತ್ರಗಳಿಗೆ ಮತದಾನ ನಡೆಡಿದ್ದು, ಒಟ್ಟು ಐದು ಕ್ಷೇತ್ರಗಳಿಗೆ 8ಜನ ಅಭ್ಯರ್ಥಿಗಳನ್ನು ಆಯ್ಕೆಯಾಗಿದ್ದರು.ಒಟ್ಟು 2,829 ಮತ ಚಲಾವಣೆಯಾಗಿದೆ.
ಉಡುಪಿ ಜಿಲ್ಲೆಯ ಉಳಿದ ಭಾಗಗಳು ಮತಕ್ಷೇತ್ರದಿಂದ ಶ್ರೀ ಬಿ, ಚಂದ್ರಶೇಖರ ನಾವಡ ಬೈಂದೂರು
ಬೆಂಗಳೂರು ಮತಕ್ಷೇತ್ರದಿಂದ ಶ್ರೀ ಜಿ. ಪ್ರಕಾಶ ಮಯ್ಯರು
ದಕ್ಷಿಣ ಕನ್ನಡ ಜಿಲ್ಲೆಯ ಮತಕ್ಷೇತ್ರದಿಂದ ಶ್ರೀ ಪ್ರಕಾಶ ಕಾರಂತರು
ಕರ್ನಾಟಕದ ಉಳಿದ ಭಾಗಗಳು ಮತಕ್ಷೇತ್ರದಿಂದ ಶ್ರೀ ಬಿ.ಜಿ. ಕೃಷ್ಣಮೂರ್ತಿಯವರು
ಸಾಲಿಗ್ರಾಮ ಮತಕ್ಷೇತ್ರದಿಂದ
ಶ್ರೀ ಪ್ರಸನ್ನ ತುಂಗ, ಶ್ರೀ ಪರಶುರಾಮ ಭಟ್ಟ, ಶ್ರೀ ಕೆ. ತಾರಾನಾಥ ಹೊಳ್ಳ ಮತ್ತು ಶ್ರೀ ಚಂದ್ರಶೇಖರ ಉಪಾಧ್ಯರು ಬಹುಮತದಿಂದ ಆಯ್ಕೆಯಾಗಿದ್ದರು. ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಬುದುವಾರ ಬೆಳಿಗ್ಗೆ ನಡೆದಿದ್ದು, ಆಯ್ಕೆ ಪ್ರಕ್ರಿಯೆಯನ್ನು ಚುನಾವನಾಧಿಕಾರಿ ಅಮೃತ ಹೊಳ್ಳ ನಡೆಸಿ, ಘೋಷಣೆ ಮಾಡಿದರು. ಈ ಹಿಂದಿನ ಆಡಳಿತ ಮಂಡಳಿಯ ಮಾಜೀ ಅಧ್ಯಕ್ಷರಾದ ಜಗದೀಶ್ ಕಾರಂತ್, ಕೆ. ಎಸ್ ಕಾರಂತ್, ಸೇರಿದಂತೆ ಹಿರಿಯರು ಉಪಸ್ಥಿತರಿದ್ದರು.





