ಶೀರೂರು ಮಠದ ಸ್ತಬ್ದ ಚಿತ್ರ ವಿಚಾರವಾಗಿ ಗೊಂದಲ

ಶೀರೂರು ಮಠದ ಸ್ತಬ್ದ ಚಿತ್ರ ವಿಚಾರವಾಗಿ ಗೊಂದಲ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ನಡೆದ ಪರ್ಯಾಯ ಪೀಠದ ಮೆರವಣಿಗೆಯಲ್ಲಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಯ ಸ್ತಬ್ದ ಚಿತ್ರ ವಿಚಾರವಾಗಿ ಭಾರೀ ಚರ್ಚೆ ನಡೆಯಿತು. 2026-28 ನೇ ಸಾಲಿನ ಶೀರೂರು ಪರ್ಯಾಯೋತ್ಸವದ ಮೆರವಣಿಗೆಯಲ್ಲಿ ಶಿರೂರು ಸ್ವಾಮಿ (ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ)ಯ ಸ್ತಬ್ದ ಚಿತ್ರ ಮೊದಲಿಗೆ ಹಾಗೂ ಉಳಿದ ಅಷ್ಟ ಮಠ ಗಳ ಸ್ತಬ್ದ ಚಿತ್ರ ನಂತರದ ಸರದಿಯಲ್ಲಿ ಬರಬೇಕು ಎಂಬ ವಿಚಾರದಲ್ಲಿ ಭಾರೀ ಚರ್ಚೆ ನಡೆದು ಗೊಂದಲಕ್ಕೆ ಕಾರಣವಾಯಿತು.

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ 2018 ರಲ್ಲಿ ನಿಧನರಾದರು. ಅವರ ಸ್ತಬ್ದ ಚಿತ್ರ ಮೊದಲಿಗೆ ಹೋದರೆ ನಾವೆಲ್ಲರೂ ಬರುವುದಿಲ್ಲ ಎಂಬ ಮಾತು ಕೇಳಿ ಬಂದ ಹಿನ್ನೆಲೆ ಯಥಾ ಪ್ರಕಾರ ಸರದಿ ಸಾಲಿನಲ್ಲಿ ಸ್ತಬ್ದ ಚಿತ್ರ ದ ಮೆರವಣಿಗೆ ನಡೆದು ಕೊನೆಯದಾಗಿ ಶಿರೂರು ಮಠದ ಲಕ್ಷ್ಮೀ ವರ ತೀರ್ಥ ಸ್ವಾಮಿಯ ಟ್ಯಾಬ್ಲೋ ನಡೆದು ಬಂದಿತು.

ವಾಟ್ಸಾಪ್ ಫೋರ್ವರ್ಡ್ ಸುದ್ದಿ ವಿರುದ್ಧ ದೂರು:
9448117050 ಎಂಬ ವಾಟ್ಸಾಪ್ ಸಂಖ್ಯೆಯ ವ್ಯಕ್ತಿಯೊಬ್ಬರು ಸುಳ್ಳು ಸುದ್ದಿಯನ್ನು ಫೋರ್ವರ್ಡ್ ಮಾಡಿದ್ದಾರೆ. ಈ ಸುದ್ದಿಯಲ್ಲಿ, ಲಕ್ಷ್ಮಿವರದ ಪುತ್ತಳಿ ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸದಿರಲು ಉಳಿದ ಎಲ್ಲಾ ಮಠಾಧೀಶರು ನಿರ್ಧರಿಸಿದ್ದಾರೆ ಎಂದು ನಮೂದಿಸಲಾಗಿದೆ.
ಈ ಸುದ್ದಿಯು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂಥದ್ದಾಗಿದೆ. ನಾವು ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ, ಇದನ್ನು ಫೋರ್ವರ್ಡ್ ಮಾಡಿದ ವ್ಯಕ್ತಿಯ ವಿರುದ್ಧ ಮತ್ತು ಮೂಲ ಕಳುಹಿಸಿದ ವ್ಯಕ್ತಿಯ ವಿರುದ್ಧ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಯ ಅಭಿಮಾನಿಗಳು ದೂರು ದಾಖಲಿಸಲು ಮುಂದಾಗಿದ್ದಾರೆ.

Join WhatsApp

Join Now

Join Telegram

Join Now

Read more

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹5 ಲಕ್ಷ ಅನುದಾನ ಮಂಜೂರು; ಅಜಿತ್ ಕುಮಾರ್ ಶೆಟ್ಟಿ ಮನವಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಂದನೆ

ಉಡುಪಿ: ಬೈಂದೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮರಳಿ ಆರೋಗ್ಯ ಇಲಾಖೆಗೆ. ತತ್ ಕ್ಷಣ ಜಾರಿಗೆ ಆದೇಶ.

ಸುಜ್ಞಾನದಂಗಳದಲ್ಲಿ ಮಂಥನ-2026 ಬೇಸಿಗೆ ಶಿಬಿರ ಶುಭಾರಂಭ: ಮಕ್ಕಳಲ್ಲಿರುವ ಪ್ರತಿಭೆಗನುಗುಣವಾಗಿ ಪೋಷಕರ ಪ್ರೋತ್ಸಾಹ ಅಗತ್ಯ – ಜಯಪ್ರಕಾಶ್ ಹೆಗ್ಡೆ

ಸಿದ್ದಾಪುರ: ಜ್ಞಾನ ಸರಸ್ವತಿ ಶಿಕ್ಷಣ ಸಂಸ್ಥೆಗೆ SSLC ಯಲ್ಲಿ 100 ಫಲಿತಾಂಶ. ಸಾಧನೆಗೈದ ವಿದ್ಯಾರ್ಥಿನಿಗೆ 25 ಸಾವಿರ ಪ್ರೋತ್ಸಾಹ ಧನ

ಬ್ರಹ್ಮಾವರ: ಭಕ್ತಿ ಭಾವದ ಸಿರಿ ಸಿಂಗಾರ ಕೋಲಾ ಸೇವೆ : ಸುಗ್ಗಿ ಸುಧಾಕರ್ ಶೆಟ್ಟಿ ನಿವಾಸದಲ್ಲಿ ಕೇಮಾರು ಈಶ ವಿಠಲ ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿ

ಸುಣ್ಣಾರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಬೆಸುಗೆ-2026’ ಬೇಸಿಗೆ ಶಿಬಿರಕ್ಕೆ ಚಾಲನೆ: ​ಸೃಜನಾತ್ಮಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಚೆಸ್ ಕ್ರೀಡಾಪಟು ಆರಾಧ್ಯ ಶೆಟ್ಟಿ

Leave a Comment